ಸುಕ್ಷೇತ್ರ ಮೋತಕಪಲ್ಲಿ ಬಲಭೀಮಸೇನ ದೇವರ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭಬಿಜನಳ್ಳಿ ಸುರೇಶ್

ಸೇಡಂ, ಡಿ,21: ಸುಕ್ಷೇತ್ರ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವರ ಜಾತ್ರಾ ಮಹೋತ್ಸವ ಸಮಾರಂಭ ವಿವಿಧ ಪೂಜಾ ಕಾರ್ಯಕ್ರಮಗಳು ನಾಳೆಯಿಂದ ವಿಜೃಮಣೆಯಿಂದ ನಡೆಯಲಿವೆ. ದಿನಾಂಕ 22/12/2023 ರಿಂದ 01/01/2024 ರವರೆಗೆ. 26/12/2023 ರಂದು ಮಹಾರಥೋತ್ಸವ 27/12/2023
ರಂದು ಗಜವಾಹನೋತ್ಸವ ಸುಕ್ಷೇತ್ರ ಮೋತಕಪಲ್ಲಿ ಈ ಕ್ಷೇತ್ರವು ನಾರದರಿಗೆ ಬಂದಿದ್ದ ಮಾನವ ಜನ್ಮವನ್ನು ನೀಗಿಸಿದಂತಹ ಕ್ಷೇತ್ರವಾಗಿದೆ.ಮೋತಕಪಲ್ಲಿಯು ತಿರುಪತಿಯ ಪೂರ್ವ ಮಹಾದ್ವಾರ ಎಂದು ಪ್ರಸಿದ್ಧಿ ಪಡೆದಿದೆ.ಈ ಕ್ಷೇತ್ರದ ಮಹಿಮೆ ಸ್ಕಂದ ಪುರಾಣದಲ್ಲಿ ಉಲೇಖವಾಗಿದೆ. ಮೂಲದೇವರ ವಿಗ್ರಹ ಉದ್ಭವ ಮೂರ್ತಿ ಎಡಗೈಯಲ್ಲಿ ಸೌಗಂಧಿಕ ಎಂಬ ಹೂ ಇರುವದರಿಂದ ಈ ವಿಗ್ರಹವನ್ನು ಭೀಮಸೇನದೇವರೆಂದು ಪ್ರಸಿದ್ಧವಾಗಿದೆ. ಒಮ್ಮೆ ವಿಗ್ರಹ ಧ್ವಂಸಿಗಳು ಉಪಟಳ ಕಾಲದಲ್ಲಿ ಶ್ರೀ ಬಲಭೀಮಸೇನ ದೇವರ ವಿಗ್ರಹವು ಭೇದಿಸಿ ಪುಷ್ಕರಣಿಯಲ್ಲಿ ಎಸೆದಿದ್ದರೂ. ಆ ಮೂರ್ತಿಯ ಸ್ಥಾನದಲ್ಲಿ ಬೇರೊಂದು ಹನುಮಂತ ದೇವರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಈ ದೇಶದ ರಾಜನು, ಯೋಚಿಸಿ ಶೀಲೆಯಿಂದ ಪ್ರತಿಮೆಯೊಂದನ್ನು ತಯಾರಿಸಿದ ಆದರೆ ಆ ವಿಗ್ರಹ ಬೆಳೆದು ಗರ್ಭಗುಡಿ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ಇದಾಗ ಆ ಮೂರ್ತಿಯನ್ನು ಹೊರಗಡೆಯೇ ಪ್ರತಿಷ್ಠಾಪಿಸಿದರು.ನಂತರ ದೇವರನ್ನು ಪ್ರಾರ್ಥಿಸಿದಾಗ ಸ್ವಪ್ನದಲ್ಲಿ ಬಂದು ವಿಚಾರವನ್ನು ಅರ್ಚರಿಗೆ ತಿಳಿಸಿದಂತೆ ವಿಗ್ರಹವನ್ನು ಪುಷ್ಕರಣಿಯಿಂದ ತೆಗೆದು ಜೋಡಿಸಿ 41 ದಿನಗಳ ಕಾಲ ಗರ್ಭಗುಡಿಯ ಬಾಗಿಲು ಮುಚ್ಚಿ ಗುಡಿಯ ಹಿಂದಿರುವ ಗೋಡೆಗೆ ಪೂಜಿಸಲಾಗುತಿತ್ತು. ಪಂಚಾಗದ ತಿಥಿಯಲ್ಲಿ ಏರುಪೇರು ಆದ ಕಾರಣ ಒಂದು ದಿನ ಮುಂಚಿತವಾಗಿಯೇ ಬಾಗಿಲು ತೆಗೆದುಬಿಟ್ಟರು. ಪ್ರತಿಮೆಯು ಮೊದಲಿನಂತೆ ಎಲ್ಲಾ ಸರಿಯಾಗಿ ಜೋಡಣೆಯಾಗಿತ್ತು ಆದರೆ ಹಣೆ ಮತ್ತು ಎದೆಯಲ್ಲಿ ಮಾತ್ರ ಸರಿಯಾಗಿ ಜೋಡಣೆ ಆಗದ ಕಾರಣ ದೇವರ ಆಜ್ಞೆಯಂತೆ ಹಣೆಯಲ್ಲಿ ಶ್ರೀ ವಾಸುದೇವ ಸಾಲಿಗ್ರಾಮ ಮತ್ತು ಎದೆಯಲ್ಲಿ ಶ್ರೀ ನರಸಿಂಹ ದೇವರ ಸಾಲಿಗ್ರಾಮವನ್ನು ಇಟ್ಟಿದ್ದಾರೆ ಅದು ಈಗಲೂ ದರ್ಶನ ಪಡೆಯಬಹುದು. ಆಂಧ್ರ ಭಾಷೆಯಲ್ಲಿ ಮುತ್ತುಗದ ಗಿಡಕ್ಕೆ “ಮೋದುಗು ಚೆಟ್ಟು” ಎಂದು ಕರೆಯುತ್ತಾರೆ. ಈ ದೇವರು ದೊರೆತಿದ್ದು ಮತ್ತು ಊರು ನಿರ್ಮಾಣವಾದದ್ದು ಎಲ್ಲವೂ ಮುತ್ತುಗದ ವನದಲ್ಲಿಯೇ ಆದುದರಿಂದ ಈ ಊರಿಗೆ “ಮೋತಕಪಲ್ಲಿ” ಎಂದು ಹೆಸರು ಬಂದಿದೆ. ಡಿಸೆಂಬರ ತಿಂಗಳಲ್ಲಿ ಬರುವ ಹೊಸ್ತಿಲ ಹುಣ್ಣಿಮೆಗೆ
ಶ್ರೀ ಬಲಭೀಮಸೇನ ಜಾತ್ರಾ ಮಹೋತ್ಸವ ಅತಿ ವಿಜೃಂಬಣೆಯಿಂದ 11 ದಿನಗಳವರೆಗೆ ಜರುಗುವುದು. ಹೊಸ್ತಿಲ ಹುಣ್ಣಿಮೆ ರಾತ್ರಿ 12 ಗಂಟೆ 10 ನಿಮಿಷಕ್ಕೆ ರಥೋತ್ಸವ ಜರುಗುವುದು.ಮರುದಿನ ಹೂವಿನ ತೇರು ಅಂದರೆ ಶ್ರೀ ಬಲಭೀಮಸೇನ ದೇವರ ಉತ್ಸವ ಮೂರ್ತಿ ಆನೆ ಮೇಲೆ ಜಾತ್ರೆಗೆ ಬಂದಂತಹ ಎಲ್ಲ ಭಕ್ತರಿಗೆ ದರ್ಶನ ಕೊಡುತ್ತ ನಂತರ ಪುಸ್ಕರಣಿಯಲ್ಲಿ ಅವಬ್ರುತ ಸ್ನಾನ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೋತಕಪಲ್ಲಿ
ಶ್ರೀ ಬಲಭೀಮಸೇನ ದೇವರ ಜಾತ್ರೆ ಮಹೋತ್ಸವ ಪ್ರಾರಂಭವಾಗಿದೆ.ದಿನಾಂಕ : 22/12/2023 ರಂದು, ದಶಮಿ ಮಧ್ಯಾಹ್ನ 12 ಗಂಟೆಗೆ ಪಲ್ಲಕ್ಕಿ ಸೇವಾ ನಂತರ “ಧ್ವಜಾರೋಹಣ” ಸಾಯಂಕಾಲ ವಿಶೇಷ ಕಾರ್ಯಕ್ರಮಗಳು:
ದಿನಾಂಕ : 23/12/2023 ರಂದು “ವೈಕುಂಠ ಏಕಾದಶಿ” ಹರಿದಿನ ಮತ್ತು ಗೀತಾ ಜಯಂತಿ
ದಿನಾಂಕ : 24/12/2023 ರಂದು ದ್ವಾದಶಿ ಬೆಳಗ್ಗೆ 5 ಗಂಟೆಗೆ ಪೂಜೆ ಮತ್ತು ಬೆಳಿಗ್ಗೆ 6 ಗಂಟೆಗೆ “ಹನುಮದ್ ವ್ರತ” ಪೂಜಾ, ಪಲ್ಲಕಿ ಸೇವೆ ಸಾಯಂಕಾಲ ವಿಶೇಷ ಕಾರ್ಯಕ್ರಮಗಳು.
ದಿನಾಂಕ : 25/12/2023 ರಂದು ಚತುರ್ದಶಿ ಬೆಳಿಗ್ಗೆ ಮಹಾ ರುದ್ರಾಭಿಷೇಕ, ಪಲ್ಲಕ್ಕಿ ಸೇವೆ, ಸಾಯಂಕಾಲ ಗಜವಾಹನೋತ್ಸವ.
ದಿನಾಂಕ : 26/12/2023 ರಂದು ಹೊಸ್ತಿಲು ಹುಣ್ಣಿಮೆ ಬೆಳಿಗ್ಗೆ 6 ಗಂಟೆಗೆ ಶ್ರೀ ವೇದವ್ಯಾಸ ಪೂಜೆ, ಸಾಯಂಕಾಲ ಪಲ್ಲಕ್ಕಿ ಉತ್ಸವ ಮೂಲಕ ರಥೋತ್ಸವದಲ್ಲಿ ದೇವರ ಸ್ಥಾಪನೆ &ಚಿmಠಿ; ದರ್ಶನ, ರಾತ್ರಿ 12:10 ಕ್ಕೆ “ಮಹಾರಥೋತ್ಸವ”.
ದಿನಾಂಕ : 27/12/2023 ರಂದು ಪ್ರತಿಪತ್ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ, ಸಾಯಂಕಾಲ 4 ಗಂಟೆಗೆ ಹೂವಿನ ಗಜವಾಹನೋತ್ಸವ ನಂತರ ಉತ್ಸವ ಮೂರ್ತಿಯನ್ನು ಸ್ವಾಮಿ ಪುಸ್ಕರಣಿಯಲ್ಲಿ ಅವಬ್ರುತ ಸ್ನಾನ ನಡೆಯುತ್ತದೆ.ದಿನಾಂಕ : 28/12/2023 ರಿಂದ 31/12/2023 ವರೆಗೆ ಶ್ರೀ ಬಲಭೀಮಸೇನ ಸ್ವಾಮಿಯ ವಿಶೇಷ ಪೂಜೆ ಕಾರ್ಯಕ್ರಮಗಳು.ದಿನಾಂಕ : 01/01/2024 ರಂದು ಪಂಚಮಿ ಬೆಳಿಗ್ಗೆ 11 ಗಂಟೆಗೆ ಪಲ್ಲಕಿ ಸೇವಾ ಹಾಗೂ ಧ್ವಜಾರೋಹಣ. ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾಗುತ್ತಾರೆ. ಸಮಸ್ತ ಶ್ರೀ ಬಲಭೀಮಸೇನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಬಲಭೀಮಸೇನ ದೇವಸ್ಥಾನದ ಅರ್ಚಕರು ಸಂಜೆವಾಣಿಗೆ ತಿಳಿಸಿದ್ದಾರೆ.


ಶ್ರೀಕ್ಷೇತ್ರ ಮೋತಕಪಲ್ಲಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆ ಇರುತ್ತದೆ. ಸೇಡಂ,ಗುರುಮಿಟಕಲ್,ಯಾದಗಿರಿ, ನಾರಾಯಣಪೆಟ್,ಕೊಡಂಗಲ್ ಮತ್ತು ಮುಧೋಳ್ ಕಡೆಯಿಂದ ಮೋತಕಪಲ್ಲಿ ಜಾತ್ರೆಗೆ ಸ್ಪೆಷಲ್ ಬಸ್ ಸೌಲಭ್ಯ ಸಿಗುತ್ತದೆ.
ವೆಂಕಟೇಶ್ವರ ಪೂಜಾರ
ಶ್ರೀ ಬಲಭೀಮಸೇನ ದೇವಸ್ಥಾನದ ಅರ್ಚಕರು ಮೋತಕಪಲ್ಲಿ