ಸುಕ್ಷೇತ್ರ ಚಳಕಪೂರ ಪ್ರವಾಸಿತಾಣವನ್ನಾಗಿ ನಿರ್ಮಿಸಲು ಸಲಹೆ

ಭಾಲ್ಕಿ: ಮಾ.27:ತಾಲೂಕಿನ ಸುಕ್ಷೇತ್ರ ಚಳಕಾಪೂರ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ನಿರ್ಮಿಸಬೇಕು ಎಂದು ಚಿದಂಬರಾಶ್ರಮ ಶ್ರೀ ಸಿದ್ದಾರೂಢ ಮಠದ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ದಾರೂಢ ಮಠದಲ್ಲಿ ರವಿವಾರ ನಡೆದ ಸದ್ಗುರು ಶ್ರೀ ಸಿದ್ಧಾರೂಢರ ಜಯಂತಿ ಮಹೋತ್ಸವದ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಸದ್ಗುರು ಶ್ರೀ ಸಿದ್ಧಾರೂಢರ ಜನ್ಮಸ್ಥಳ ಮತ್ತು ಆಂಜನೇಯ ಸ್ವಾಮಿಯ ವಾಸಸ್ಥಾನವಾದ ಚಳಕಾಪೂರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೀಗಾಗಿ ಈ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೇಂದ್ರದ ಪ್ರವಾಸೋದ್ಯಮ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯಕ, ಚಳಕಾಪುರ ಗ್ರಾಮವು ಭಾಲ್ಕಿ ತಾಲೂಕಿನ ಪವಿತ್ರ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಪ್ರವಾಸಿ ತಾಣ ನಿರ್ಮಿಸಲು ಕೇಂದ್ರದಿಂದ 10 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಆಸ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪೂರೆ, ಡಾ| ಶೈಲೇಂದ್ರ ಬೆಲ್ದಾಳೆ, ಬಾಬುವಾಲಿ, ಮಾತೋಶ್ರೀ ಲಕ್ಷ್ಮೀದೇವಿ, ಜಡಿಸಿದ್ದೇಶ್ವರ ಸ್ವಾಮೀಜಿ, ಡಾ| ಸ್ವರೂಪಾನಂದ ಸ್ವಾಮಿಗಳು, ದಯಾನಂದ ಸ್ವಾಮಿಗಳು, ಅದ್ವೈತಾನಂದ ಸ್ವಾಮಿ, ಮಾತೋಶ್ರೀ ವಿದ್ಯಾತಾಯಿ, ಜ್ಞಾನೇಶ್ವರಿ ತಾಯಿ, ರಾಜೇಶ್ವರಿ ತಾಯಿ, ಶಿವಶಂಕರ ಸಾಧಕರು, ವಿನಾಯಕ ಸಾಧಕರು, ಸತೀಶ ಸಾಧಕರು ತ್ರಿವಿಧ ಸುಖಗಳ ವಿಷಯದ ಬಗ್ಗೆ ಪ್ರವಚನ ನೀಡಿದರು.
ಶ್ರೀಮಠದ ಶ್ರೀ ಶಂಕರಾನಂದ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತೋಷ ಹೊಸದೊಡ್ಡಿ, ಕೆ.ಸಿ.ಪಾಟೀಲ, ವಿಜಯಕುಮಾರ ಬೆಳಕೇರಿ ಉಪಸ್ಥಿತರಿದ್ದರು.
ಶಾಂತನಗೌಡ, ಉಮೇಶ ಹಿರೇಮಠ, ಪ್ರಭು ಮಾಸಲದಾರ, ಬಸವರಾಜ ಹುಲೆಪನೋರ, ಶಿವಕುಮಾರ ಹುಲೇಪನೋರ ಸಂಗೀತ ಸೇವೆ ನಡೆಸಿಕೊಟ್ಟಿರು. ಇದೇವೇಳೆ ಸದ್ಗುರು ಶ್ರೀ ಸಿದ್ದಾರೂಢರ ಚರಿತಾಮೃತ ಪಾರಾಯಣ ಮಾಡಲಾಯಿತು.
ಶ್ರೀ ಗಣೇಶಾನಂದ ಮಹಾರಾಜರು ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಪಾಟೀಲ ನಿರೂಪಿಸಿದರು. ಶಿವಶಂಕರ ಸ್ವಾಮಿ ವಂದಿಸಿದರು.