ಸುಕ್ಷೇತ್ರ ಕತ್ನಳ್ಳಿಯಲ್ಲಿ ಸದಾಶಿವ ಮುತ್ಯಾರ ಜಾತ್ರೆಗೆ ವಿಧ್ಯುಕ್ತ ಚಾಲನೆ

ಸಂಜೆವಾಣಿ ವಾರ್ತೆ,
ವಿಜಯಪುರಮ,ಏ.10 :ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ (ಕತ್ನಳ್ಳಿ) ಶ್ರೀ ಗುರು ಚಕ್ರವರ್ತಿ ತ್ರಿಕಾಲಧ್ಯಾನಿ ಸದಾಶಿವ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಬಬಲಾದಿ- ಚಮಕೇರಿ -ಕತ್ನಳ್ಳಿ ಶ್ರೀ ಶಿವಯ್ಯ ಮಹಾಸ್ವಾಮಿಗಳು ಜಾತ್ರೆಗೆ ಚಕ್ರವರ್ತಿ ಸದಾಶಿವ ಶಿವಯೋಗಿಗಳ ದೇವಾಲಯ ಆವರಣದಲ್ಲಿ ಗೋಮಾತೆ ಹಾಗೂ ಜಾನುವಾರ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶಿವಯ್ಯ ಮಹಾಸ್ವಾಮಿಗಳು ಮಾತನಾಡುತಾ,್ತ ಪ್ರಕೃತಿ ಕೋಪದಿಂದ ಜೀವಸಂಕುಲನಗಳ ಬಹಳ ಕಷ್ಟದಲ್ಲಿ ಇರುತ್ತವೆ. ಮಾನವರಾದ ನಾವು ಅದನ್ನು ಅರಿತು ಕಷ್ಟದಲ್ಲಿರುವ ಜೀವ ಸಂಕುಲನಗಳಿಗೆ ನೀರು ಮತ್ತು ಅನ್ನ ನೀಡಿ (ಅರ್ಪಿಸಿ) ಅವುಗಳ ಹಾಗೂ ಭಗವಂತನ ಸೇವೆಯಲ್ಲಿ ಪಾತ್ರರಾಗಬೇಕು. ಎಲ್ಲಕ್ಕಿಂತಲೂ ಹೃದಯ ಶ್ರೀಮಂತಿಕೆ ಬಹಳ ದೊಡ್ಡದು. ಯಾವುದೇ ಕಷ್ಟದಲ್ಲಿ ಇದ್ದದ್ದನ್ನು ನೋಡಿ ಮುಂದೆ ಸುಮ್ಮನೆ ಹೋಗಬಾರದು. ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಬೇಕೆಂದು ಆಶೀರ್ವಚನ ನೀಡಿದರು.
ಜಾನುವಾರ ಜಾತ್ರೆ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ ನೆರವೇರಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ. ಹೋಟೇಲ ಉದ್ಯಮಿ ಬಾಬುಗೌಡ ಬಿರಾದಾರ. ಬಸವರಾಜ ಕೌಲಗಿ. ಗಂಗಾಧರ ಸಂಬಣ್ಣಿ . ಸಂಗಮೇಶ ಬಬಲೇಶ್ವರ. ಗೋಪಾಲ ಘಟಕಾಂಬಳೆ. ಈರಣ್ಣ ಪಟ್ಟಣಶೆಟಿ,್ಟ ನಾಗರಾಜ ಲಂಬು. ಅಪ್ಪಸಾಹೇಬ ಕೋಟ್ಯಾಳ. ಶರಣಪ್ಪ ಬಬಲೇಶ್ವರ .ಬಸನಗೌಡ ಬಿರಾದಾರ. ಪ್ರಕಾಶ ಪಾಟೀಲ (ಹತ್ತಳ್ಳಿ), ಅಶೋಕ ಪಾಟೀಲ. ರಾಜುಗೌಡ ಪಾಟೀಲ. ಪುಲಸಿಂಗ್À ಚವ್ಹಾಣ,.ಕುಮಾರ್ ಮೋದಿ. ಹೊನ್ನಪ್ಪ ಬಿಸನಾಳ. ಅರುಣ ಮಾಚಪ್ಪನವರ, ಕಲ್ಲುಗೌಡ ಪಾಟೀಲ. ಸಿದ್ದು ಮಲ್ಲಿಕಾರ್ಜುನಮಠ ಮಠದ ಭಕ್ತರು ಹಾಗೂ ಸುತ್ತಲಿನ ಗ್ರಾಮದ ರೈತ ಬಾಂಧವರು ಭಾಗವಹಿಸಿದ್ದರು.