ಲಿಂಗಸಗೂರು,ಜೂ.೧೯-
ಮಣ್ಣೆತ್ತಿನ ಅಮವಾಸ್ಯೆ ಅಥವ ಆಷಾಢ ಅಮವಾಸ್ಯೆ ಎಂದು ಕರೆಯಲಾಗುತ್ತಿರುವ ಸದರಿ ಅಮವಾಸ್ಯೆಯು ರವಿವಾರ ಬಂದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ಸುಕ್ಷೇತ್ರ ಅಮರೇಶ್ವರಕ್ಕೆ ಭಕ್ತಾದಿಗಳು ಆಗಮಿಸಿರುವುದರಿಂದ ದೇವಾಲಯ ಜನಜಂಗುಳಿಯಾಗಿ ದರ್ಶನಕೆ ನೂಕುನುಗ್ಗಲಾದ ಘಟನೆ ಜರುಗಿದೆ.
ಸದರಿ ಮಣ್ಣೆತ್ತಿನ ಅಮವಾಸ್ಯೆಯು ರವಿವಾರ ಬಂದಿರುವುದರಿಂದ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಅಮರೇಶ್ವರಕ್ಕೆ ಭಕ್ತಾದಿಗಳು ತಂಡೋಪತಂಡವಾಗಿ ಆಗಮಿಸುವುದು ಕಂಡುಬಂತು ದೇವಾಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿರುವುದರಿಂದ ದನಕೆ ಭಕ್ತಾದಿಗಳು ಸಾಲುಗಟ್ಟಿನಿಂತಿದ್ದರು ಅಮರೇಶ್ವರ ದೇವಸ್ಥಾನ ಗರ್ಭಗುಡಿಯ ಪ್ರವೇಶದ್ವಾರದಲಿ ಹಾಗೂ ಹೊರಹೋಗುವ ದ್ವಾರದಲ್ಲಿ ವಿಪರೀತ ಜನಜಂಗುಳಿಯಾಗಿ ನೂಕಾಟ ತಳ್ಳಾಟವಾಯಿತು
ಒಂದು ಬಾಗಿನಿಲಿನಿಂದ ಪ್ರವೇಶವಾಗಿ ಮತ್ತೊಂದು ಬಾಗಿಲಿನಲಿ ಹೊರಹೋಗಲು ಅವಕಾಶವಿದ್ದರು ಭಕ್ತಾದಿಗಳು ನಿಯಮ ಮೀರಿ ದರ್ಶನಮಾಡುತ್ತಿರುವುದು ಕಂಡುಬಂತು ನೂಕಾಟ ತಳ್ಳಾಟದಲಿ ಮಹಿಳೆಯರು ಮಕ್ಕಳು ವಯಸಾದವರು ಗುಂಪಿನಲಿ ಸಿಲುಕಿ ತೊಂದರೆ ಅನುಭವಿಸುವ ದೃಶ್ಯ ಕಂಡುಬಂತು.
ಆಷಾಢಮಾಸದ ಅಮವಾಸ್ಯೆ ರವಿವಾರ ಬಂದಿರುವುದು ಒಂದೆಡೆಯಾದರೆ ಮಹಿಳೆಯರಿಗೆ ಫ್ರೀ ಬಸ್ ಇರುವುದಿಂದ ಭಕ್ತಾದಿಗಳು ಸಾಕಷ್ಟು ಪ್ರಮಾಣದಲ್ಲಿ ಹರಿದುಬರಲು ಮತ್ತೊಂದು ಕಾರಣ ಎನಬಹುದಾಗಿದೆ.
ಅಮರೇಶ್ವರ ಬಸ್ ಫುಲ್: ಅಮವಾಸ್ಯೆ ನಿಮಿತ್ಯವಾಗಿ ಒಂದುದಿನ ಮುಂಚಿತವಾಗಿಯೆ ಅಮರೇಶ್ವರಕ್ಕೆ ಸಾರಿಗೆ ಇಲಾಖೆ ಬಸ್ ಓಡಿಸುತ್ತಿದ್ದರು ಅಮವಾಸ್ಯೆ ದಿನವಾದ ಇಂದು ಅಮರೇಶ್ವರಕ್ಕೆ ಹೋಗುವ ಎಲ್ಲಾ ಬಸ್ ಗಳು ಫುಲ್ ಆಗಿರುವುದು ಕಂಡುಬಂತು ನಿರ್ವಾಹಕರು ಬಸ್ ಗಳನ್ನು ದಾರಿಯಲ್ಲಿ ನಿಲ್ಲಿಸಿ ನಿಲ್ಲಿಸಿ ಟಿಕೇಟ್ ನೀಡುವುದು ಕಂಡುಬಂತು ಇದು ಮಹಿಳೆಯರಿಗೆ ಉಚಿತ ಪ್ರವಾಸದ ಭಾಗ್ಯದ ಏಫೆಕ್ಟ ಎನ್ನುವ ಮಾತುಗಳು ಕೇಳಿಬಂದವು.
ಒಟ್ಟಾರೆಯಾಗಿ ದೇವಸ್ಥಾನಕ್ಕೆ ಸಾಕಷ್ಟು ಜನ ಭಕ್ತರು ಬಂದಿರುವುದರಿಂದ ನೂಕುನುಗ್ಗಲಾದರು ಸಹಿತ ದೇವಸ್ಥಾನ ಮಂಡಳಿ ಮಾತ್ರ ಇದಾವುದು ತನಗೆ ಸಂಬಂದವಿಲ್ಲ ಎಂಬಂತೆ ವರ್ತಿಸಿರುವುದು ನೋವಿ ಸಂಗತಿಯೆ ಸರಿ.