ಸುಕೋ ಬ್ಯಾಂಕ್ ಜನಸ್ನೇಹಿ ಕಾರ್ಯ

ಸಿರುಗುಪ್ಪ, ಜ.02: ವಿಶ್ವದ ಎಲ್ಲಾರನ್ನು ಕಾಡಿದ ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಸಾಮಾನ್ಯ ನಾಗರಿಕರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದರು ನಮ್ಮ ಬ್ಯಾಂಕ್ ಜನಸ್ನೇಹಿಯಾಗಿ ಕೆಲಸ ಮಾಡಿದೆ ಎಂದು ಸುಕೊ ಬ್ಯಾಂಕ್ ವ್ಯವಸ್ಥಾಪಕ ಮರಿಸ್ವಾಮಿ ತಿಳಿಸಿದರು.
ನಗರದ ಸುಕೋ ಬ್ಯಾಂಕ್ ಸಭಾಗಂಣದಲ್ಲಿ ಶುಕ್ರವಾರ ನಡೆದ ನೂತನ 2021ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಪ್ರತೀ ವರ್ಷದಂತೆ ನೂತನ ಸಂವತ್ಸರರ ದಿನವಾದ ಇಂದು ಆಕರ್ಷಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿ ಮತ್ತು ಗ್ರಾಹಕರೊಂದೊಗೆ ನಗರದಲ್ಲಿ 11ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಅವರು ಪ್ರತಿಯೊಂದು ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಹೆಸರಿನಲ್ಲಿ ಲ್ಯಾಪ್‍ಟಾಪ್‍ಗಳಿಗೆ ಸಾಲ ವಿತರಣೆ, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಪುನರಾರಂಭಿಸಲು ಯಶಸ್ವಿ ಸಾಲ ಯೋಜನೆ, ಉದಯೋನ್ಮುಖ ವೈದ್ಯರುಗಳಿಗೆ ಆಧುನಿಕ ಉಪಕರಣಗಳ ಕಿಟ್ ಅಲ್ಲದೆ ಆಧುನಿಕ ವ್ಯವಸ್ಥೆಗಳಾದ ಬ್ಯಾಟರಿ ರೀಚಾರ್ಜ್ ಕೇಂದ್ರ ತೆರೆಯಲು ಸಾಲ, ವಿಶೇಷವಾಗಿ ಪರಿಸರಸ್ನೇಹಿ ಸಾಲ ಯೋಜನೆಗಳನ್ನು ನೀಡಿದ್ದೇವೆಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದರು.
ಬ್ಯಾಂಕಿನ ಹಿರಿಯ ಅಧಿಕಾರಿ ಈರೇಶ್ ಮಾತನಾಡಿ, ಈಬಾರಿಯ ಕ್ಯಾಲೆಂಡರನ್ನು ಕಳೆದ ಬಾರಿಗಳಿಗಿಂತ ವಿಭಿನ್ನ ವಿಷಯಗಳನ್ನು ಅಂದರೆ ವ್ಯಾಪಾರ, ಸಣ್ಣ ಮತ್ತು ದೊಡ್ಡ ಬಂಡವಾಳ ಮನೆವೈದ್ಯ, ಆಧುನಿಕ ಕೃಷಿ, ಚಿತ್ರಕಲೆ, ಸೈಬರ್ ಕ್ರೈಂ ಜಾಗೃತಿ ವಿಷಯ ಅಳವಡಿಸಿಕೊಂಡು ರಚಿಸಿದ್ದಾರೆ ತುಂಬಾ ಸೋಗಸಾಗಿ ರೂಪುಗೊಂಡಿದೆ ಎಂದರು.
ಬ್ಯಾಂಕಿನ ಹಿರಿಯ ಅಧಿಕಾರಿ ಚಂದ್ರಶೇಖರ್, ಗ್ರಾಹಕರು ಮತ್ತು ಅತಿಥಿಗಳಾಗಿ ವೆಂಕಟರಮಣ ರೆಡ್ಡಿ, ಮಾನಪ್ಪ ಪೂಜಾರಿ, ಪಾಡುರಂಗ ಶೆಟ್ಟಿ ಬ್ಯಾಂಕ್ ಸಿಬ್ಬಂದಿ ಮಂಜುಳಾ ಹಾಗೂ ಇನ್ನಿತರರು ಇದ್ದರು.