ಸುಕೋ ಬ್ಯಾಂಕಿನಿಂದ 9.25% ಆಕರ್ಷಕಠೇವಣಿಯೋಜನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.03: ಕರ್ನಾಟಕದ ಸಹಕಾರಿರಂಗದಅಗ್ರಣಿ ಬ್ಯಾಂಕ್‍ಆಗಿರುವ ಸುಕೋ ಬ್ಯಾಂಕ್ “400 ದಿನಗಳಿಗೆ ಶೇ.9.25% ಬಡ್ಡಿ ನೀಡುವ ವಿಶೇಷಠೇವಣಿಯೋಜನೆಯನ್ನುಜಾರಿಗೆತಂದಿದೆಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಭಾರತೀಯರಿಜರ್ವ್ ಬ್ಯಾಂಕ್ ದಿನಾಂಕ ಫೆ.8ರಂದು ತನ್ನ ವಿತ್ತಿಯ ನೀತಿ ಯಲ್ಲಿ ಶೇಕಡಾ 0.25% ಬಡ್ಡಿದರವನ್ನು ಹೆಚ್ಚಿಸಿದೆ.ಈ ಹಿನ್ನೆಲೆಯಲ್ಲಿ ಸುಕೋ ಬ್ಯಾಂಕಿನ ಗ್ರಾಹಕರಿಗೆ ಈ ಬಡ್ಡಿ ದರ ಹೆಚ್ಚಳದ ಲಾಭ ದೊರಕಿಸಿ ಕೊಡಲು ಶೇ. 9.25 ಗರಿಷ್ಥ ಬಡ್ಡಿದರದಯೋಜನೆಯನ್ನುಜಾರಿಗೆತಂದಿದೆ.
ಸುಕೋ ಬ್ಯಾಂಕ್‍ತನ್ನ ಗ್ರಾಹಕರಿಗೆ ಹಣದುಬ್ಬರಕ್ಕಿಂತ ಹೆಚ್ಚಿನ ಬಡ್ಡಿ ನೀಡಬೇಕೆನ್ನುವ ನೀತಿಯಡಿ ಈ 9.25 ಬಡ್ಡಿದರದಠೇವಣಿಯೋಜನೆಯನ್ನುಜಾರಿಗೆತಂದಿದೆಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ
 9.25%  ಬಡ್ಡಿದರದಠೇವಣಿಯ ಮುಖ್ಯಾಂಶಗಳು:
ಈ  ವಿಶೇಷಠೇವಣಿಯಲ್ಲಿ ಹೂಡಲುಕನಿಷ್ಠ ಮಿತಿರೂಪಾಯಿ 10,000.  ಗರಿಷ್ಟ ಮಿತಿ:  ಅನಿಯಮಿತವಾಗಿರುತ್ತದೆ.
ಈ ಠೇವಣಿಯಅವಧಿ : 400 ದಿನಗಳು  ಆಗಿರುತ್ತದೆ. ಈ ಯೋಜನೆಅಡಿಯಲ್ಲಿಠೇವಣಿಯನ್ನುಅವಧಿಗೆ ಮುಂಚಿತವಾಗಿಯೇ  ಮುಕ್ತಾಯಗೊಳಿಸಲು ಕೂಡಅವಕಾಶವಿದೆ.
ಈ ಯೋಜನೆಗೂ ಸಹ ಆದಾಯತೆರಿಗೆಯ ಟಿ ಡಿ ಎಸ್‍ಅನ್ವಯಿಸುತ್ತದೆ.
ಈ ಯೋಜನೆಯು  ಸೀಮಿತ  ಅವಧಿಗೆ ಮಾತ್ರಇರುವುದರಿಂದಗ್ರಾಹಕರುತ್ವರಿತವಾಗಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು  ವ್ಯವಸ್ಥಾಪಕ ನಿರ್ದೇಶಕರು ವಿನಂತಿಸಿದ್ದಾರೆ.