ಸುಕೋ ಬ್ಯಾಂಕಿನಿಂದ ೯.೨೫% ಆಕರ್ಷಕ ಠೇವಣಿ ಯೋಜನೆ

ರಾಯಚೂರು,ಮಾ.೦೩- ಕರ್ನಾಟಕದ ಸಹಕಾರಿ ರಂಗದ ಅಗ್ರಣಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ೪೦೦ ದಿನಗಳಿಗೆ ಶೇ. ೯.೨೫% ಬಡ್ಡಿ ನೀಡುವ ವಿಶೇಷ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಭಾರತೀಯ ರಿಜರ್ವ್ ಬ್ಯಾಂಕ್ ದಿನಾಂಕ ೦೮-೦೨-೨೦೨೩ ರಂದು ತನ್ನ ವಿತ್ತಿಯ ನೀತಿ (ಒoಟಿeಣಚಿಡಿಥಿ Poಟiಛಿಥಿ) ಯಲ್ಲಿ ಶೇಕಡಾ ೦.೨೫% ಬಡ್ಡಿದರವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸುಕೋ ಬ್ಯಾಂಕಿನ ಗ್ರಾಹಕರಿಗೆ ಈ ಬಡ್ಡಿ ದರ ಹೆಚ್ಚಳದ ಲಾಭ ದೊರಕಿಸಿ ಕೊಡಲು ಶೇ. ೯.೨೫ ಗರಿಷ್ಟ ಬಡ್ಡಿ ದರದ ಯೋಜನೆಯನ್ನು ಜಾರಿಗೆ ತಂದಿದೆ.
ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ಹಣ ದುಬ್ಬರಕ್ಕಿಂತ ಹೆಚ್ಚಿನ ಬಡ್ಡಿ ನೀಡಬೇಕೆನ್ನುವ ನೀತಿಯಡಿ ಈ ೯.೨೫ ಬಡ್ಡಿ ದರದ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
೯.೨೫% ಬಡ್ಡಿ ದರದ ಠೇವಣಿ ಯ ಮುಖ್ಯಾಂಶಗಳು:
ಈ ವಿಶೇಷ ಠೇವಣಿಯಲ್ಲಿ ಹೂಡಲು ಕನಿಷ್ಠ ಮಿತಿ ರೂಪಾಯಿ ೧೦,೦೦೦. ಗರಿಷ್ಟ ಮಿತಿ: ಅನಿಯಮಿತವಾಗಿರುತ್ತದೆ.
ಈ ಠೇವಣಿಯ ಅವಧಿ : ೪೦೦ ದಿನಗಳು ಆಗಿರುತ್ತದೆ. ಈ ಯೋಜನೆ ಅಡಿಯಲ್ಲಿ ಠೇವಣಿಯನ್ನು ಅವಧಿಗೆ ಮುಂಚಿತವಾಗಿಯೇ ಮುಕ್ತಾಯಗೊಳಿಸಲು ಕೂಡ ಅವಕಾಶವಿದೆ.
ಈ ಯೋಜನೆಗೂ ಸಹ ಆದಾಯ ತೆರಿಗೆಯ ಟಿಡಿಎಸ್ ಅನ್ವಯಿಸುತ್ತದೆ.
ಈ ಯೋಜನೆಯು ಸೀಮಿತ ಅವಧಿಗೆ ಮಾತ್ರ ಇರುವುದರಿಂದ ಗ್ರಾಹಕರು ತ್ವರಿತವಾಗಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರು ವಿನಂತಿಸಿದ್ದಾರೆ.