ಸುಕೋ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವ ಒಡಂಬಡಿಕೆಗೆ ಸಹಿ.


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.11: ಬ್ಯಾಂಕುಗಳು ಗ್ರಾಹಕರಿಂದಠೇವಣಿ ಸ್ವೀಕಾರ, ಅವರಿಗೆ ಸಾಲದ ಸಹಾಯ, ಹಣ ವರ್ಗಾವಣೆ ಸೇವೆಗಳ ಜೊತೆಗೆ ಕಳೆದ ಒಂದುದಶಕದಿಂದಜೀವ ವಿಮೆ ಹಾಗೂ ಸ್ಥಿರ ಮತ್ತು ಚರಾಸ್ತಿಗಳ ವಿಮೆ ಯೋಜನೆಗಳನ್ನು ಒದಗಿಸುತ್ತಿವೆ. ವಿಮಾ ಕಂಪನಿಗಳು, ಬ್ಯಾಂಕುಗಳು ಹೊಂದಿರುವ ಅಪಾರ ಗ್ರಾಹಕರ ವೃಂದವನ್ನು ಸುಲಭವಾಗಿ ತಲುಪುವ ಅವಕಾಶಗಳನ್ನು ಗಮನಿಸಿರುವ ವಿಮಾ ಕಂಪನಿಗಳು ಬ್ಯಂಕುಗಳ ಜೊತೆಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಠೇವಣಿದಾರ ಬ್ಯಾಂಕಿನ ಸಾಲ ಹೊಂದಿರುವ ಗ್ರಾಹಕರಿಗೂ ಆಯಾ ಯೋಜನೆಗಳ ಮೂಲಕ ವಿಮಾ ಸೌಲಭ್ಯ ಪೂರೈಸುತ್ತಲಿವೆ.
ಸುಕೋ ಬ್ಯಾಂಕ್, ಹೈದ್ರಾಬಾದ್ ಮೂಲದ ಶ್ರೀರಾಮ ಲೈಫ್‍ಇನ್ಶೂರೆನ್ಸ್‍ಕಂಪನಿಯ ವಿಮಾ ಯೋಜನೆಗಳ ಪೂರೈಕೆಗಾಗಿ ದಿನಾಂಕ 09/02/2024 ರಂದು ಬಳ್ಳಾರಿಯಲ್ಲಿ ಒಡಂಬಡಿಕೆ ಮಾಡಿಕೊಂಡಿತು. ಸುಕೋ ಬ್ಯಾಂಕಿನ ಅಧ್ಯಕ್ಷರಾದ ಮೋಹಿತ್ ಮಸ್ಕಿ ಅವರ ಉಪಸ್ಥಿತಿಯಲ್ಲಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಜಿ ಎಸ್‍ರವಿಸುಧಾಕರ ಮತ್ತು ಶ್ರೀರಾಮ ಇನ್ಸೂರೆನ್ಸ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷರಾದ  ಲಿಯೋನೆಲ್ ಫರ್ನಾಂಡಿಸ್‍ಅವರುಒಡಂಬಿಡಿಕೆಗೆ ಸಹಿ ಮಾಡಿದರು.
ವಿಮಾ ಕಂಪನಿ ಗ್ರಾಹಕರಿಗೆ ನೀಡುವ ವಿವಿಧ ಯೋಜನೆಗಳಲ್ಲಿ ನೂತನ ಮತ್ತು ಪ್ರಮುಖ ಯೋಜನೆ ಅಂದರೆ, ಬ್ಯಾಂಕಿನಿಂದ ಸಾಲ ಪಡೆದಿರುವ ಗ್ರಾಹಕರಿಗೆ ಜೀವ ವಿಮೆ ಮಾಡುವುದರ ಮೂಲಕ ಅಕಸ್ಮಾತಜೀವ ಹಾನಿ ಆದಾಗಅವರ ಸಾಲದ ಸ0ಪೂರ್ಣ ಬಾಕಿ ಮೊತ್ತವನ್ನು ಬ್ಯಾಂಕಿಗೆ ಒದಗಿಸಿ, ಮೃತರ ಪರಿವಾರವನ್ನು ಋಣ ಮುಕ್ತರನ್ನಾಗಿಸುವುದು ಎನ್ನುವುದನ್ನು ಬ್ಯಾಂಕಿನಅಧ್ಯಕ್ಷರು ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಮದರ್ಭದಲ್ಲಿ ತಿಳಿಸಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ  ಜಿ ಎಸ್‍ರವಿ ಸುಧಾಕರ ಅವರು ವಿಮಾ ಯೋಜನೆಗಳು ಹೇಗೆ ಗ್ರಾಹಕರ ಹಿತರಕ್ಷಣೆಗೆಒತ್ತು ನೀಡುತ್ತವೆ ಅನ್ನುವುದನ್ನು ಸಭೆಗೆ ತಿಳಿಸಿದರು.
ಶ್ರೀರಾಮ ಇನ್ಸೂರೆನ್ಸ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷರಾದ ಲಿಯೋನೆಲ್ ಫರ್ನಾಂಡಿಸ್‍ಅವರು ಉತ್ತರ ಕರ್ನಾಟಕದ ಜನತೆಗೆ ಸುಕೋ ಬ್ಯಾಂಕ ಮೂಲಕ ವಿಮಾ ಯೋಜನೆಗಳನ್ನು ತಲುಪಿಸುವ ಅವಕಾಶದ ಸದ್ಬಳಕೆ ಮಾಡಿಕೊಂಡುಗ್ರಾಹಕರ ಹಿತೈಷಿಯಾಗುವಆಶಯ ವ್ಯಕ್ತಪಡಿಸಿದರು.
ನಗರದ ನಕ್ಷತ್ರ ಹೋಟೆಲಿನಲ್ಲಿ ನಡೆದ ಸರಳ ಸಮಾರಂಭದ ವೇದಿಕೆಯಲ್ಲಿ ಸುಕೋ ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ಸಾವಿತ್ರಿ ಮಸ್ಕಿ, ಸುಕೋ ಬ್ಯಾಂಕಿನ ಸಲಹೆಗಾರಾದ ಎಂ.ಆರ್.ಗಿರೀಶ್, ಶ್ರೀರಾಮ ಇನ್ಶೂರೆನ್ಸ್‍ನ ಹಿರಿಯ ಅಧಿಕಾರಿಗಳಾದ  ರಾಮಕುಮಾರ, ರಾಜೇಶಗೋಪುರಾಜ, ಆದೇಶ, ವಸಂತರೆಡ್ಡಿ, ಗೌರವ, ಕಲ್ಯಾಣ, ಶ್ರೀಮತಿ ಮೀನು ಚೋಪ್ರ ಉಪಸ್ಥಿತರಿದ್ದರು.  
ಶ್ರೀರಾಮ ವಿಮಾಕಂಪನಿಯ ರಾಜೇಂದ್ರಅವರು ಸ್ವಾಗತಿಸಿದರು, ಆದೇಶಅವರು ವಂದನಾರ್ಪಣೆ ಸಲ್ಲಿಸಿದರು.