ಸುಕೋ ಬ್ಯಾಂಕಿಗೆ ರಾಜ್ಯಾದಂತ ವಿಸ್ತರಣೆಗೊಳ್ಳಲು ರಿಸರ್ವ್ ಬ್ಯಾಂಕ್ ಅನುಮತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.10: ಉತ್ತರ ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿ ಉತ್ತರ ಮತ್ತು ಮಧ್ಯಕರ್ನಾಟಕದಲ್ಲಿ ಶಾಖಾ ಕಾರ್ಯ ನಿರ್ವಹಿಸುತ್ತಿರುವ ಸುಕೋ ಬ್ಯಾಂಕಿಗೆಕರ್ನಾಟಕದಾದ್ಯಂತ ವಿಸ್ತರಣೆಗೊಳ್ಳಲು ಭಾರತೀಯರಿಸರ್ವ್ ಬ್ಯಾಂಕ್‍ಅನುಮತಿ ನೀಡಿದೆ.
ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಇಪ್ಪತ್ತೊಂಬತ್ತು ಶಾಖೆಗಳನ್ನು ಹೊಂದಿರುವ ಸುಕೋ ಬ್ಯಾಂಕ್, ಎಲ್ಲಾರೀತಿಯಡಿಜಿಟಲ್ ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿರುವ ಏಕೈಕ ಸಹಕಾರಿ ಬ್ಯಾಂಕ್‍ಆಗಿದೆ.
ಇದೀಗ ಸುಕೋ ಬ್ಯಾ0ಕಿಗೆ ರಿಸರ್ವ ಬ್ಯಾಂಕ್‍ಕರ್ನಾಟಕರಾಜ್ಯದಾದಂತ್ಯಕಾರ್ಯಕ್ಷೇತ್ರ ವಿಸ್ತರಿಸಲುಅನುಮತಿ ನೀಡಿರುವುದರಿಂದರಾಜ್ಯದಾದಂತ್ಯ ಶಾಖೆಗಳ ಜಾಲ ವಿಸ್ತರಿಸಲಾಗುವುದುಎಂದು ಬ್ಯಾಂಕಿನಅಧ್ಯಕ್ಸರಾದ ಮೋಹಿತ ಮಸ್ಕಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಕೇಂದ್ರಕಚೇರಿ ಹೊಂದಿರುವ ಸುಕೋ ಬ್ಯಾಂಕ್ ಬೆಳಗಾವಿಯಿಂದ ಚಿತ್ರದುರ್ಗದವರೆಗೆಕಲ್ಬುರ್ಗಿಯಿಂದಚನ್ನಗಿರಿಯವರೆಗೆಒಟ್ಟು 29 ಶಾಖೆಗಳನ್ನು ಹೊಂದಿದೆ.ಕಳೆದ ಆರ್ಥಿಕ ವರ್ಷದಲ್ಲಿ ಸಾವಿರದಎರಡು ನೂರುಅರವತ್ನಾಲ್ಕುಕೋಟಿಗೂ(ರೂ.1264 ಕೋಟಿ) ಹೆಚ್ಚು ವ್ಯವಹಾರ ಮಾಡಿದೆ. ವಿಶೇಷವಾಗಿ ನಿವ್ವಳ ದುಡಿಯಲಾರದ ಸಾಲಗಳು (NPA) ಶೂನ್ಯವಾಗಿರುವುದು ಸುಕೋ ಬ್ಯಾಂಕಿನ ಪರಿಣಾಮಕಾರಿ ಆಡಳಿತದ ಸಾಧನೆಯಾಗಿದೆಎಂದು ಮೋಹಿತ್ ಮಸ್ಕಿ ತಿಳಿಸಿದ್ದಾರೆ.