ಸುಕೋಬ್ಯಾಂಕ್ ನಿಮ್ಮಮನೆ ಬಾಗಿಲಿಗೆ ಅಭಿಯಾನ.

ಕೂಡ್ಲಿಗಿ.ನ. 2:-ಸುಕೋ ಬ್ಯಾಂಕ್ ನಿಮ್ಮ ಮನೆ ಬಾಗಿಲಿಗೆ ಎನ್ನುವ ಅಭಿಯಾನದ ವಿಶೇಷ ಕಾರ್ಯಕ್ರಮ ಭಾನುವಾರ ಕೂಡ್ಲಿಗಿ ಸುಕೋ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಹಮ್ಮಿಕೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ದೇಶಾದ್ಯಾಂತ ಉಂಟಾದ ಹಣದ ಅರಿವಿನ ಕೊರತೆ,
ಅಸುರಕ್ಷತೆ ಸಮಯದಲ್ಲಿ ಸುಕೋ ಬ್ಯಾಂಕ್ ತನ್ನ ವಿವಿಧ ಸಾಲದ ಉತ್ಪನ್ನಗಳನ್ನು ಹಾಗೂ ಜನಜೀವನಕ್ಕೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಒಳ್ಳೆಯ ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಈಗ ತನ್ನ ಕಾರ್ಯ ಕ್ಷೇತ್ರದಲ್ಲಿರುವ ಜನರ ಮನೆ ಮತ್ತು ಅಂಗಡಿಗಳ ಬಾಗಿಲಿಗೆ ಈ ಯೋಜನೆಗಳನ್ನು ತಲುಪಿಸಲು ಹಾಗೂ ಹಣದ ಅರಿವನ್ನು ಹೆಚ್ಚಿಸುವ ಗುರುತರ ಜವಾಬ್ದಾರಿಗಳೊಂದಿಗೆ ರಾಜ್ಯಾದ್ಯಂತ ಈ ಅಭಿಯಾನ ಸುಕೋ ಬ್ಯಾಂಕ್ ನಡೆಸಿದೆ. ಗ್ರಾಹಕರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ್ ಮಸ್ಕಿ ತಿಳಿಸಿದ್ದಾರೆ.