ಸುಕಿ ಸಾಂಸ್ಕೃತಿಕ ಪ್ರಶಸ್ತಿ ಪ್ರಧಾನ ಹಾಗೂ ಸುಮಧುರ ಗೀತೆಗಳ ಸಂಭ್ರಮ

ಕಲಬುರಗಿ:ಜ.26: ಸುಕಿ ಸಾಂಸ್ಕೃತಿಕ ಸಂಸ್ಥೆ (ರಿ) ಕಲಬುರಗಿ ತನ್ನ ಪ್ರಥಮ ವಾರ್ಷಿಕೋತ್ಸವ ಸಂಧರ್ಭದಲ್ಲಿ ಜನೆವರಿ ೨೮ ರಂದು ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟಗ್ಯಾಲರಿಯಲ್ಲಿ ಸುಕಿ ಸಾಂಸ್ಕೃತಿಕ ಪ್ರಶಸ್ತಿ ೨೦೨೪ ಹಾಗೂ ಸುಮಧುರ ಗೀತೆಗಳ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾಮಾಜಿಕ ಕ್ಷೇತ್ರಕ್ಕೆ ಸದಾಶಿವ ಜೋಶಿ ಹಾಗೂ ಸಂಗೀತ ಕ್ಷೇತ್ರಕ್ಕೆ ಪಾರ್ವತಿ ವಿ. ಉರ್ಕಿಮಠ ಸಲ್ಲಿಸಿರುವ ಸೇವೆ ಪರಿಗಣಿಸಿ ಅವರನ್ನು ‘ಸುಕಿ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಎಂ .ರಾಚಪ್ಪ ಎಂ ಡಿ ಕೆ.ಕೆ.ಆರ್.ಟಿ.ಸಿ. ಕಲಬುರಗಿ ಸಮಾರಂಭ ಉದ್ಘಾಟಿಸಿವರು.
ಪ್ರೊ. ಪಿ.ಬಿ. ಸಂತಪ್ಪನವರ ನಿವೃತ್ತ ಕುಲಸಚಿವರು ಸಂಸ್ಕೃತ ವಿಶ್ವವಿದ್ಯಾಲಯ ದೆಹಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಅಧ್ಯಕ್ಷತೆ ಕಿರಣ್ ಪಾಟೀಲ ಅಧ್ಯಕ್ಷರು, ಸುಕಿ ಸಾಂಸ್ಕೃತಿಕ ಸಂಸ್ಥೆಯ ವಹಿಸುವರು.
ಪ್ರಕಾಶ ದಂಡೋತಿ,ಆನಂದ ಪಾಟೀಲ್, ವಿಠಲ ಬಿ. ಮೇತ್ರೆ ,ಮಹೇಶಕುಮಾರ ನಿಪ್ಪಾಣಿ,ಎಂ. ಸಂಜೀವ,
ಕವಿರಾಜ ನಿಂಬಾಳ,ಸಂಗಯ್ಯ ಹಳ್ಳದಮಠ, ಅಂಬರೀಷ ಕುಲಕರ್ಣಿ, ಸಿದ್ದಣ್ಣ ಅವಂಟಗಿ,
ವಾಣಿಶ್ರೀ ಜೋಶಿ, ಪ್ರತಿಭಾ ಕಡಗಂಚಿ,ಕಾವೇರಿ ಹಿರೇಮಠ,ಶರಣು ಪಟ್ಟಣಶೆಟ್ಟಿ ಗಾಯಕರಿಂದ ಸುಮಧುರ ಗೀತೆಗಳ ಸಂಭ್ರಮ ಕಾಯಕ್ರಮ ನಡೆಯಲಿದೆ ನುಡಿ ಸಾರಥ್ಯ ಮಹಿಪಾಲ ರೆಡ್ಡಿ ಮುನ್ನೂರ ಸೇಡಂ ವಹಿಸುವರು.