ಸುಕರವೇಯಿಂದ ಪುನೀತ್ ಗೆ ಶ್ರದ್ಧಾಂಜಲಿ

 ದಾವಣಗೆರೆ.ನ.೧; ಅಕಾಲಿಕವಾಗಿ ನಿಧನ ಹೊಂದಿದ ಪವರ್ ಸ್ಟಾರ್ ಪುನಿತ್ ರಾಜಕುಮಾರ್ಅವರಿಗೆ ಸುವರ್ಣ ಕರ್ನಾಟಕ ವೇದಿಕೆಯಿಂದ  ನಗರದ ನಿಟುವಳ್ಳಿ ಮುಖ್ಯರಸ್ತೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷಕುಮಾರ, ರಾಜ್ಯ ಉಪಾಧ್ಯಕ್ಷ ಹೆಚ್.ಪರಶುರಾಮ, ಮುಖಂಡರಾದಶಾಂತಕುಮಾರ ದೊಡ್ಡಮನಿ, ಅಸಂಘಟಿತ ಕಾರ್ಮಿಕ ವಲಯದ ಅಧ್ಯಕ್ಷಚಂದ್ರಪ್ಪ, ಹನುಮಂತಪ್ಪ, ಸಿದ್ದೇಶ್ ಮತ್ತಿತರರು ಶ್ರದ್ಧಾಂಜಲಿಕಾರ್ಯಕ್ರಮದಲ್ಲಿ ಹಾಜರಿದ್ದರು.