ಸುಕನ್ಯ ದ್ವೀಪ ವಲ್ಲ ಎಸ್ಟೇಟ್….ನ ಕಥೆ

“ಸುಕನ್ಯ ದ್ವೀಪ ” ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ.
ಬಹುತೇಕ ಹೊಸಬರೇ ನಟಿಸಿ ನಿರ್ಮಾಣ ಮಾಡಿರುವ ಈ ಚಿತ್ರದ ಹೆಸರು ಕೇಳಿದರೆ ಇದೊಂದು ದ್ವೀಪದ ಕಥೆ ಇರಬೇಕು ಎನ್ನುವ ವಿಷಯ ಎಂತವರಿಗೂ ಕುತೂಹಲ ಕಾಡದೇ ಇರಲಾರದು. ಆದರೆ ಇದು ದ್ವೀಪದ ಕಥೆಯಲ್ಲ ಬದಲಾಗಿ ಎಸ್ಟೇಟ್ ನ ಹೆಸರು. ಅದರ ಸುತ್ತ ಸಾಗುವ ಚಿತ್ರದ ಕಥೆ ಸಾಗಲಿದೆ.
ಚಿತ್ರದಲ್ಲಿ ರಾಜ್ ಪ್ರಭು, ಸಚಿನ್ ಪುರೋಹಿತ್ ಮತ್ತು ರವಿ ಹಾಗು ಶ್ರೇಯಾ ವಸಂತ್, ಅಕ್ಷಿತಾ ನಾಗರಾಜ್, ಮತ್ತು ಚುಂಚಿತಾ ನಾಯಕ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಅಪ್ಝಲ್ ನಿರ್ದೇಶನ ಮಾಡುತ್ತಿದ್ದು ಎಂ.ಡಿ ಕೌಶಿಕ್ ಸೇರಿದಂತೆ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಾಯಕರಲ್ಲಿ ಒಬ್ಬರಾಗಿರುವ ರಾಜ್ ಪ್ರಭು, ಬೆಂಗಳೂರಿನಲ್ಲಿ ೮ ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿಕ್ಕಮಗಳೂರು ಕಳಸ ಮೂಡಿಗೆರೆ ಸೇರಿದಂತೆ ಮತ್ತಿತರ ಕಡೆ ತೆರಳುವ ಉದ್ದೇಶವಿದೆ ವರ್ಷಾಂತ್ಯದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ತರುವ ಉದ್ದೇಶವಿದೆ ಎಂದು ಮಾಹಿತಿ ಹಂಚಿಕೊಂಡರು.
ಸುಕನ್ಯಾ ದ್ವೀಪ ಎಂದರೆ ಇದು ದ್ವೀಪದ ಕುರಿತ ಚಿತ್ರ ಅಲ್ಲ ಎಸ್ಟೇಟ್ ಹೆಸರು .ಲವ್ ಕಾಮಿಡಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರದಲ್ಲಿದೆ ಎನ್ನುವ ವಿವರ ಅವರದು. ಯಾವುದೇ ಮುಜುಗರವಿಲ್ಲದೆ ಮನೆಮಂದಿಯೆಲ್ಲ ಚಿತ್ರವನ್ನು ನೋಡಬಹುದು ಎನ್ನುವ ವಿಶ್ವಾಸವನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.