ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‍ಬುಕ್ ವಿತರಣೆ

ಹಗರಿಬೊಮ್ಮನಹಳ್ಳಿ :ನ.03 ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಹೆಣ್ಣು ಮಗುವಿಗಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀಮತಿ ವಾಣಿ ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿ ಬಳಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‍ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಬಡ ಕುಟುಂಬದ ಹೆಣ್ಣು ಮಗುವಿನ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲೆಂಬ ಸದುದ್ದೇಶದಿಂದ ಪ್ರಧಾನಿ ಮೋದಿಜೀಯವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ಈ ದಿನ ಆ ಬಡ ಕುಟುಂಬಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್‍ಬುಕ್‍ಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ ಪಾಸ್ ಬುಕ್‍ಗಳನ್ನು ವಿತರಿಸಿದರು. ಬಿಜೆಪಿ ಮಹಿಳಾ ಜಿಲ್ಲಾ ಕಾರ್ಯದರ್ಶಿ ಬಡಿಗೇರ್ ನಿರ್ಮಲ, ಅಧ್ಯಕ್ಷೆ ನಾಗರತ್ನ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾಜ್, ನಗರ ಘಟಕ ಮಹಿಳಾ ಅಧ್ಯಕ್ಷೆ ಉಮಾ, ಪ್ರಧಾನ ಕಾರ್ಯದರ್ಶಿ ಶೋಭಾ, ಅನುರಾಧ ಮುಖಂಡರಾದ ನಿರ್ಮಲ ಮೆಣಸಿಗಿ, ಎನ್.ಸೌಭಾಗ್ಯ, ರೂಪಾ, ಯಶೋಧ, ಬಾಗಳಿ ವೆಂಕಟೇಶ್, ಬಿ.ಶ್ರೀನಿವಾಸ್ ಇತರರಿದ್ದರು.