ಸುಂಧಾಳ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ

ಔರಾದ :ಜು.30: ತಾಲೂಕಿನ ಸುಂಧಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾರುತಿ ನರಸಪ್ಪ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಮಲಗೊಂಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 20 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯ್ತಿಗೆ 15 ಸದಸ್ಯರು ಹಾಜರಿದ್ದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆ ಅವಿರುದ್ಧವಾಗಿ ನಡೆದಿದೆ ಎಂದು ಚುನಾವಣಾ ಅಧಿಕಾರಿ ವೀರಶೆಟ್ಟಿ ರಾಥೋಡ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಿಡಿಒ ಶರಣಪ್ಪ, ಮಾಜಿ ಅಧ್ಯಕ್ಷೆ ಶ್ರೀದೇವಿ ವಿಜಯ್ ಕುಮಾರ್, ಗುಂಡಯ್ಯ ಸ್ವಾಮಿ ರಘುನಾಥ್ ಬಿರಾದರ್, ಚಂದ್ರಶೇಖರ ಪಾಟೀಲ್, ಶಿವಾಜಿ ಪಾಟೀಲ, ಶಿವಕುಮಾರ ಪಾಟೀಲ, ವಿಠ್ಠಲ ಪಾಟೀಲ, ಸತೀಶ ಚಿಟ್ಟಿ ಸಮಾಜಿಕ ಕಾರ್ಯಕರ್ತರಾದ ಮಹಾದೇವ ಶಿಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.