ಸುಂದರ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ಕೊಡುಗೆ ಅಪಾರ- ಕಾರಜೋಳ

ಲಿಂಗಸುಗೂರು.ಸೆ.೦೭- ತಾಲೂಕಿನ ಹಿರೇ ಜಾವುರ ಕ್ರಾಸ್‌ನಲ್ಲಿ ವಿಶ್ವ ಗುರು ಅಶ್ವಾ ರೂಡ ಬಸವೇಶ್ವರರ ಕಂಚಿನ ಪುತ್ಥಳಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅನಾವರಣ ಮಾಡಿದರು.
ನಂತರ ಸ್ಥಳೀಯ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ೧೨ ಶತಮಾನದ ಬಸವಾದಿ ಶರಣರ ಆಶಯದಂತೆ ಸುಂದರ ಸಮಾಜ ನಿರ್ಮಾಣಕ್ಕೆ ಅಂದಿನ ವಚನ ಸಾಹಿತ್ಯ ಸಮಾಜದ ಕಣ್ಣು ತೆರೆಸುವ ಕೇಲಸ ಹನ್ನೆರಡನೇ ಶತಮಾನದಲ್ಲಿ ಶಿವಶರಣರು ಮಾಡಿದ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತ ಅಂದಿನ ಬಸವಾದಿ ಶರಣರ ಸುಂದರ ಸಮಾಜ ನಿರ್ಮಾಣಕ್ಕೆ ಶಿವಶರಣರ ಕೊಡುಗೆ ಅಪಾರವಾಗಿದೆ ಎಂದು ಸಚಿವರಾದ ಕಾರಜೋಳರು ಅಭಿಮತ ವ್ಯಕ್ತಪಡಿಸಿದರು .
ಆದರೆ ಇಂದಿನ ದಿನಗಳಲ್ಲಿ ಶರಣರ ನಾಡಿನಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ಸಾಧ್ಯಾವಾಗದಿರುವದಕ್ಕೆ ವಿಷಾದದ ಮೂಲಕ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.ವಿಶ್ವದ ಮಹಾನ್ ಮಾನವತಾವಾದಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿರುವ ಲಿಂಗಸೂಗೂರು ತಾಲೂಕಿನ ಹಿರೇ ಜಾವುರು ಕ್ರಾಸ್‌ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವುರುವುದು ಕಂಚಿನ ಪ್ರತಿಮೆಯೊಂದನ್ನು ಕ್ರಷ್ಣಾ ಭಾಗ್ಯ ಜಲ ನಿಗಮ ಇಲಾಖೆ ಅನುದಾನದ ವತಿಯಿಂದ
ಬಸವೇಶ್ವರ ಪುತಳಿಯನ್ನು ಸ್ಥಾಪಿಸಲಾಯಿತು.
ನಾವು ಎಲ್ಲರು ಬಸವಣ್ಣನವರ ಅನುವಾಯಿಗಳು ಅವರು ಯಾರನ್ನು ಜಾತಿ ಯಿಂದ ಗುರುತಿಸುವ ಕೇಲಸ ಹಾಗಬಾರು ಎಂದು ಗೋವಿಂದ ಕಾರಜೋಳ ಅವರು ಹೇಳಿದರು.೭೨೦ ಜನ ಶರಣಗಣ ಶರಣರು ಅವರು ಬಸವಣ್ಣ ಅನುವಾಯಿಗಳಾಗಿದ್ದರು ನಾವು ಎಲ್ಲರೂ ಒಂದೇ ಎಂದು ಜಿವನ ಸಾಗಿಸಬೇಕು ಸಚಿವರು ಮೇಲಿನಂತೆ ಹೇಳಿದರು ಶರಣರಾದ ಇಲಕಲ್ ಶರಣರು ಗುರು ಮಾಹಂತ ಸ್ವಾಮಿ ಸಂತೆಕಲ್ಲೂರ ಗುರು ಬಸವ ಸ್ವಾಮಿಗಳು ಅಮರೇಶ್ವರ ಗಜದಂಡ ಸ್ವಾಮಿ ಶರಣರು ಯರಡೊಣಾ ಮಠದ ಶರಣರು ಮುರುಘರಾಜೇಂದ್ರ ಸ್ವಾಮೀಜಿ ಅಂಕಲಗಿ ಮಠದ ಪಕೀರೇಶ್ವರ ಶರಣರು ಲಿಂಗಸುಗೂರು ವಿಜಯ ಮಾಹಂತ ಶರಣರಾದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಮಾಹನ್ ಶರಣರು ಬಸವೇಶ್ವರರ ಜೀವನ ಚರಿತ್ರೆ ವಚನ ಸಾಹಿತ್ಯದ ಕುರಿತು ನಾಡಿನ ಜನತೆಗೆ ಪರಿಚಯಿಸುವ ಪ್ರಯತ್ನ ನಾವೆಲ್ಲರೂ ಕೇಲಸ ಮಾಡಬೇಕು ಎಂದು ಶರಣರು ಹೇಳಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಲಿಂಗಸುಗೂರು ಶಾಸಕ ಡಿಎಸ್ ಹೂಲಗೇರಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಮಾಜಿ ಶಾಸಕ ಮಾನಪ್ಪ ವಜ್ಜಲ್ ಜೆಡಿಎಸ್ ಮುಖಂಡ ಸಿದ್ದು ವೈ ಬಂಡಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ ಶಿವಬಸಪ್ಪ ಹೆಸರೂರ ಸಾಹಾಯಕ ಆಯುಕ್ತರಾದ ರಾಹುಲ್ ಸಂಕನೂರ ತಹಶೀಲ್ದಾರ್ ಬಲರಾಂ ಕಟ್ಟಿಮನಿ ಕೆಬಿಜೆಎನ್‌ಎಲ್ ಸಿಇ ಅಶೋಕ್ ವಾಸನದ್ ಎಸ್‌ಸಿ ಸಂಜೀವ ಕುಮಾರ್ ಇಇ ಶಂಕರ್ ಎಇಇ ಗಳಾದ ಮಲ್ಲಿಕಾರ್ಜುನ ಲಿಂಗಪ್ಪ ಭಜಂತ್ರಿ ಸೇರಿದಂತೆ ಹಿರೆ ಜಾವುರ್ ಗ್ರಾಮದ ಜನರು ಹಾಗೂ ವಿವಿಧ ಪಕ್ಷಗಳ ರಾಜಕೀಯ ಪಕ್ಷಗಳ ಮುಖಂಡರು ಬಸವಣ್ಣನವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದರು.