ಸುಂದರನಗರದ ತುಂಬ ಕಸದರಾಶಿ

ಕಲಬುರಗಿ ಮೇ 4: ಕಲಬುರಗಿ ನಗರದ ಸುಂದರ ನಗರ ಬಡಾವಣೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕಸ ವಿಲೇವಾರಿ ಮಾಡುತ್ತಿಲ್ಲ. ಚರಂಡಿ ಸ್ವಚ್ಛಗೊಳಿಸಿಲ್ಲ.
ಪಾಲಿಕೆ ಆಯುಕ್ತರು ಹಾಗೂ ಎಸ್‍ಐ ಗೆ ತಿಳಿಸಿದರೆ ಕಸ ವಿಲೇವಾರಿ ಗಾಡಿ ಕೆಟ್ಟಿದೆ ಎಂದು ಹೇಳುತ್ತಾರೆ.
ಕಸ ರಾಶಿ ರಾಶಿಯಾಗಿ ಬಿದ್ದಿದೆ. ಬೀದಿ ನಾಯಿ ಮತ್ತು ಹಂದಿಗಳು ರಸ್ತೆ ತುಂಬಾ ಗಲೀಜು ಮಾಡುತ್ತಿವೆ. ಕರೋನಾ ಎರಡನೇ ಅಲೆಯಲ್ಲಿ ಸ್ವಚ್ಛತೆ ಇಲ್ಲದೆ ಸಾರ್ವಜನಿಕರಿಗೆ ಹಲವಾರು ರೋಗಗಳು ಬರುತ್ತಿವೆ. ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸಲು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.