
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.15: ತಾಲೂಕಿನ ಜೋಳದರಾಶಿ ಬಳಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಕ್ಷೇತ್ರದ ಜನತೆಗೆ ಹಮ್ಮಿಕೊಂಡಿದ್ದ ಬಾಡೂಟದ ಶಾಮೀಯನ ನಿನ್ನೆ ಮಧ್ಯಾಹ್ನ ಸುಂಟರ ಗಾಳಿ ಬೀಸಿದ್ದರಿಂದ ಮೇಲೆ ಹಾರಿ ನೆಲ್ಲಕ್ಕುರುಳಿ ಬಿದ್ದ ಘಟನೆ ನಡೆದಿದೆ.
ಶಾಮೀಯಾನ ಕಟ್ಟಿದ್ದ ಕೋಲು, ನೆಲಕ್ಕೆ ಹೂಳಿದ್ದ ಕಬ್ಬಿಣದ ರಾಡುಗಳು, ಹಗ್ಗ ಸಮೇತ ಕಿತ್ತು ಬಂದ ಬಿದ್ದಿದ್ದರಿಂದ ಶಾಮೀಯನದಡಿ ಊಟ ಮಾಡುತ್ತಿದ್ದ ಜನರ ಮೇಲೆ ಬಿದ್ದಿದ್ದರಿಂದ ಇಬ್ಬರಿಗೆ ಗಾಯವಾಗಿದೆ. ಶಾಮೀಯಾನ ಮೇಲಕ್ಕೆ ಹಾರುತ್ತಿದ್ದಂತೆ ಜನತೆ ಹೊರ ಓಡಿ ಆಗಬಹುದಾದ ಅಪಾತದಿಂದ ಪಾರಾದರೂ. ಈ ವೇಳೆ ಶಾಸಕ ನಾಗೇಂದ್ರ, ಮಾಧ್ಯಮದ ಕೆಲ ಪ್ರತಿನಿಧಿಗಳು ಸಹ ಅಲ್ಲಿಯೇ ಇದ್ದರು.