ಕಲಬುರಗಿ,ಅ.1:”ಆರೋಗ್ಯವಾಗಿರಲು ಸ್ವಚ್ಛತೆ ಬಹಳ ಮುಖ್ಯ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸ್ತ್ಯನಾರಾಯಣ ಹೇಳಿದರು.
ಇಂದು ಅವರು ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆಯ ಪ್ರಯುಕ್ತ ಸುಂಟನೂರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸಿಯುಕೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸುಂಟನೂರು ಗ್ರಾಮದಲ್ಲಿ ನಡೆದ ಸ್ವಚ್ಛತಾ ಚಟುವಟಿಕೆಗಳ ನಂತರ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೈರ್ಮಲ್ಯದಿಂದಾಗಿ ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯಾದಂತಹ ಅನೇಕ ರೋಗಗಳು ಹರಡುತ್ತವೆ. ಈ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ನಾವು ನಮ್ಮ ಊರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೈರ್ಮಲ್ಯವಾಗಿಡಬೇಕು. ಆರೋಗ್ಯ, ಶಿಕ್ಷಣ, ಮಹಿಳಾ ಹಕ್ಕುಗಳು ಮತ್ತು ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ, ಜೀವನೋಪಾಯದ ಸೃಷ್ಟಿ ಮತ್ತು ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ವಿಶ್ವವಿದ್ಯಾಲಯದ ಸುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಅವರು ಮಾತನಾಡಿ, “ಉತ್ತಮ ಆರೋಗ್ಯ ಎಂದರೆ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವುದು. ವ್ಯಕ್ತಿ ಉತ್ಪಾದಕವಾಗಿರಲು ಉತ್ತಮ ಆರೋಗ್ಯ ಅಗತ್ಯ. ವ್ಯಕ್ತಿ ಉತ್ಪಾದಕನಾಗಿದ್ದರೆ ಅವನು ಉದ್ಯೋಗಿಯಾಗಬಹುದು. ಉದ್ಯೋಗಸ್ಥನಾಗಿದ್ದರೆ ಅವನ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಅವನು ತನ್ನ ಕುಟುಂಬಕ್ಕೆ ಉತ್ತಮ ಶಿಕ್ಷಣ ಮತ್ತು ಆರೋಗ್ಯವನ್ನು ನೀಡಬಹುದು. ಆದ್ದರಿಂದ ಎಲ್ಲವೂ ಆರೋಗ್ಯ ಮತ್ತು ನೈರ್ಮಲ್ಯದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಆದ್ದರಿಂದ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ.ಬಸವರಾಜ ಕುಬಕಡ್ಡಿ ಮಾತನಾಡಿ, “ಇಂದು ನಾವು ಮಾಡುತ್ತಿರುವ ಸ್ವಚ್ಚತಾ ಕಾರ್ಯ ಸಾಂಕೇತಿಕವಾದದ್ದು. ಪ್ರತಿದಿನ ವಿಶ್ವವಿದ್ಯಾಲಯದ ಜನರು ಬಂದು ಸ್ವಚ್ಛತೆ ಮಾಡಲು ಸಾಧ್ಯವಿಲ್ಲ. ಜನರಲ್ಲಿ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನೀವೆಲ್ಲರೂ ನಿಮ್ಮ ಮನೆ, ಬೀದಿ, ಶಾಲೆ, ಅಂಗವಾಡಿ ಕೇಂದ್ರ, ಆರೋಗ್ಯ ಕೇಂದ್ರ, ದೇವಸ್ಥಾನ ಮತ್ತು ನೀರಿನ ಮೂಲಗಳನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದು ನಮ್ಮ ಜೀವನಕ್ಕೆ ಅತ್ಯಗತ್ಯವಾಗಿದೆ” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ʼಏಕ್ ತಾರಿಕಾ ಏಕ್ ಘಂಟಾʼ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪಾರಾವ್ ಚಿಂಚೋಳಿ, ಸದಾಶಿವ ಪಾಟೀಲ, ನಾಗೇಂದ್ರಪ್ಪ ಬಿರಾದಾರ್, ಬಂಡೆಪ್ಪ ಹೊಸಮನಿ, ಅಂಗವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಿಯುಕೆ ಎನ್.ಎಸ್.ಎಸ್. ಅಧಿಕಾರಿ ಶಿವಂ ಮಿಶ್ರಾ, ಡಾ.ಮಧುಕರ ದತ್ತ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.