ಸುಂಕೇಶ್ವಹಾಳ: ವಾಲ್ಮೀಕಿ ಜಯಂತಿ ಆಚರಣೆ

ಗಬ್ಬೂರು.ಅ.31- ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸುಂಕೇಶ್ವರಹಾಳ ಗ್ರಾಮದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಗ್ರಾಮದ ಮಹಿಳೆಯರು ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ಮೂರ್ತಿಗೆ ವಿಜೃಂಭಣೆಯಿಂದ ಮಾರ್ಲಾಪಣೆ ಮಾಡಿ ಮತ್ತು ಕಳಸ ಬೆಳಗಿದರು. ನಂತರ ವಾಲ್ಮೀಕಿ ತಾಲೂಕಾಧ್ಯಕ್ಷ ರಾಚಣ್ಣ ನಾಯಕ ಮಾತನಾಡಿದರು. ಅವರು ಎಲ್ಲರಿಗೂ ತಿಳಿದಂತೆ ಮಹಾಪಾಪಿಯಾದ ಬೇಡನು ನಾರದಮಹರ್ಷಿಗಳಿಂದ “ರಾಮ” ಮಂತ್ರವನ್ನು ಪಡೆದು ಅದು ಸರಿಯಾಗಿ ಅನ್ನಲು ಬಾರದೇ ಇದ್ದಾಗ “ಮರಾ” “ಮರಾ” ಎಂದು ವಿಪರೀತವಾಗಿಯೇ ನುಡಿದು ಪಾಪನಿರ್ಮುಕ್ತನಾಗಿ ಆದಿಕವಿ ಮಹರ್ಷಿ ವಾಲ್ಮೀಕಿ ಎಂದೇನಿಸಿಕೊಂಡಿದ್ದು ನಾಮ ಜಪದ ಅದ್ಭುತ ಪವಾಡವಾಗಿದೆ.
ಭೂಮಿಯಲ್ಲಿ ಬಿತ್ತಿದ ಬೀಜವು ಹೇಗೆ ಬಿದ್ದರೂ ಅದರ ಮೊಳಕೆಯು ಮೇಲ್ಮುಖವಾಗಿಯೇ ಬಿರುವಂತೆ ಶ್ರದ್ಧೆಯೊಂದಿದ್ದರೆ ಸಾಕು, ಮಂತ್ರವನ್ನು ಹೇಗೆ ಜಪಿಸಿದರೂ ಸಿದ್ದಸುತ್ತದೆ.
ಅಂತೆಯೇ ತುಲಸೀದಾಸರು:ಉಲಟಾನಾಮ ಜಪತ ಜಗಜಾನಾ, ವಾಲ್ಮೀಕೀ ಭಯೋ ಬ್ರಹ್ಮ ಸಮಾನಾ ಎಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸ್ತಾನಿ ನಾಯಕ ಖಾನಪುರು, ಸಂಗಮೇಶ ನಾಯಕ ರಾಮದುರ್ಗ, ಗಂಗಾಮತಸ್ಥ ಸಮಾಜದ ತಾಲೂಕಾಧ್ಯಕ್ಷ ಪರಮಾನಂದ, ಶರಣಗೌಡ ಅಬಕಾರಿ ಪತ್ರಕರ್ತ, ಮಲ್ಲು ಹದ್ದಿನಾಳ, ಮುದ್ದಪ್ಪ ಜಿನ್ನಾಪುರು, ರಾಮಪ್ಪ ನಾಯಕ, ಆಂಜನೇಯ ಬಡಿಗೇರ, ಮುದುಕಪ್ಪ ನಾಯಕ, ಹೊನ್ನಪ್ಪ , ನಾಯಕ, ಚೆನ್ನಪ್ಪ ಸಾಹುಕಾರ್ ಹಾಗೂ ಸುಂಕೇಶ್ವರಹಾಳ ಗ್ರಾಮದ ಮಹಿಳೆ ತಾಯಂದಿರು ಸೇರಿದಂತೆ ಇನ್ನೂ ಅನೇಕರಿದ್ದರು.