ಸುಂಕೇಶ್ವರಹಾಳ: ವಿದ್ಯಾಗಮ ಅದ್ಧೂರಿ ಚಾಲನೆ

ಗಬ್ಬೂರು:- ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ೯ ತಿಂಗಳುಗಳಿಂದ ಬಂದಾಗಿದ್ದ ಶಾಲೆಗಳು ಜನವರಿ ೧ ರಿಂದ ಪ್ರಾರಂಭಗೊಳ್ಳುತ್ತಿದ್ದು, ಸುಂಕೇಶ್ವರಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಗಮ ಭಾಗ೨ ಅದ್ದೂರಿಯಾಗಿ ಚಾಲನೆ ನೀಡಿದರು. ತಾಲೂಕು ಪಂಚಾಯತಿ ವತಿಯಿಂದ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಂಕೇಶ್ವರಹಾಳ ಕ್ಲಸ್ಟರ್ ಸಿ. ಆರ್. ಪಿ ವೆಂಕಟಾಂಜಿನೇಯ್ಯ ಅವರು ’ಜಿಲ್ಲಾ ಹಾಗೂ ತಾಲೂಕು ಆಡಳಿತದ ಮಾರ್ಗದರ್ಶನದಂತೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೂ ಸ್ಯಾನಿಟೈಸರ್ ನ್ನು ಸಿಂಪಡಿಸಲು ಬುಧವಾರದಿಂದ ಸ್ಥಳೀಯ ಸರಕಾರಿ ಶಾಲೆಯ ಮೂಲಕ ಚಾಲನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಸ್ಯಾನಿಟೈಸರ್ ನ್ನು ಸಿಂಪಡಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಸಂಜೆವಾಣಿಗೆ ತಿಳಿಸಿದರು. ಶಾಲೆ ಶುಚಿಗೊಳಿಸಿದ ಶಿಕ್ಷಕರು: ಶಿಕ್ಷಕರೇ ಶಾಲಾ ಆವರಣವನ್ನು ಶುಚಿಗೊಳಿಸುವ ಮೂಲಕ ಮಾದರಿಯಾದ ಘಟನೆ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಶಿಕ್ಷಕರಿಂದ ನಡೆಯಿತು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು- ಶಿಕ್ಷಕಿಯರು ಮುಖ್ಯೋಪಾಧ್ಯಾಯ ಸೇರಿದಂತೆ ಎಲ್ಲರೂ ಪೊರಕೆ ಹಿಡಿದು ಕಸಗೂಡಿಸಿದರು. ಜೇಡರ ಬಲೆಗಳನ್ನು ಬಿಡಿಸಿದರು.ಎಲ್ಲ ವರ್ಗದ ಕೋಣೆಗಳನ್ನು, ವಿದ್ಯಾಗಮ ಭಾಗ-೨ ನಡೆಯುವ ಶಾಲಾವರಣವನ್ನು ಸಾಬೂನಿನ ನೀರು ಹಾಕಿ ತೊಳೆದರು. ಸ್ವಚ್ಚತಕಾರ್ಯ ಪೂರ್ಣವಾದ ಮೇಲೆ ಮಾವಿನ ಎಲೆಗಳು ತೆಂಗಿನ ತೋರಣ ತಳಿರುಗಳ ಕಟ್ಟಿದರು ಮತ್ತು ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಶಿಕ್ಷಕಿಯರು ಕಳಸ ಬೆಳಗಿ ಅದ್ಧೂರಿಯಾಗಿ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ಸಂಯೋಜಕರಾದ ಬಸವರಾಜ, ಮುಖ್ಯೋಪಾಧ್ಯಾಯಪಕಿಯಾದ ವಿಜಯಲಕ್ಷ್ಮಿ, ಸಹ ಶಿಕ್ಷಕರಾದ ಬಸನಗೌಡ, ಶ್ರೀದೇವಿ ಸುಮಂಗಲ, ಚೇತನ, ಸ್ನೇಹಲತಾ, ವಿರೂಪಾಕ್ಷಿ, ಎಸ್ಡಿಎಮ್ ಸಿ ಅಧ್ಯಕ್ಷರಾದ ಸಾಬಣ್ಣ ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀದೇವಿ ಗಂಡ ಮುದುಕಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.