ಸೀಳು ತುಟಿ-ಬಾಯಿ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ

ಚಿಟಗುಪ್ಪ,ಫೆ.12-ಕಲಬುರಗಿಯ ಮೇಡಿಕೇರ್ ಆಸ್ಪತ್ರೆ ಹಾಗೂ ಸ್ಟೈಲ್ ಟ್ರೇನ್ ಇಂಡಿಯಾ ಯೋಜನೆ ಅಡಿಯಲ್ಲಿ ಸೀಳು ತುಟಿ ಮತ್ತು ಸೀಳು ಬಾಯಿ ಹೊಂದಿರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಫೆಬ್ರವರಿ 12 ರಿಂದ 20ರ ವರೆಗೆ ನುರಿತ ಹೆಸರಾಂತ ವೈದ್ಯರಾದ ಡಾ. ಅಶ್ವಿನ ಶಹಾ ರವರ ನೇತೃತ್ವದಲ್ಲಿ ಮೇಡಕೇರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಬೀದರ್ ಜಿಲ್ಲೆಯ ಅರ್ಹ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೇವಣಸಿದ್ದಯ್ಯಾ ಮಠಪತಿ 9113836066 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತಿದ್ದು, ರೋಗಿ ಜೊತೆ ಒಬ್ಬರಿಗೆ ಪ್ರಯಾಣ ಖರ್ಚು ವೆಚ್ಚ ಸಂಸ್ಥೆ ಒದಗಿಸುತ್ತದ್ದೆ. ಈ ಯೋಜನೆ ಸದು ಉಪಯೋಗ ಮಾಡಿಕೊಳಬೇಕು ಎಂದು ರೇವಣಸಿದ್ದಯ್ಯಾ ಮಠಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.