ಸೀಲ್ ಡೌನ್‌ಗೆ ಬಿಬಿಎಂಪಿ ಸಜ್ಜು

ಬೆಂಗಳೂರು, ಡಿ.೩೦-ರಾಜಧಾನಿ ಬೆಂಗಳೂರಿನಲ್ಲಿ ರೂಪಾಂತರ ಕೊರೋನಾ ಸೋಂಕು ಪತ್ತೆ ಬೆನ್ನಲ್ಲೇ, ಬಿಬಿಎಂಪಿ ಅಧಿಕಾರಿಗಳು ಮತ್ತೆ ಸೀಲ್ ಡೌನ್ ಪ್ರಕ್ರಿಯೆಗೆ ಮುಂದಾಗಿದ್ದು, ಈಗಾಗಲೇ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೀಲ್ ಡೌನ್ ತಯಾರಿಯಲ್ಲಿರುವಂತೆ ಮೌಖಿಕ ಸೂಚನೆ ನೀಡಿದ್ದಾರೆ.

ಸದ್ಯ ನಗರದ ವಸಂತಪುರದಲ್ಲಿನ ಸಿರಿ ಎಂಬ ಅಪಾರ್ಟ್???ಮೆಂಟ್??ಗೆ ಬ್ರಿಟನ್??ನಿಂದ ವಾಪಸಾಗಿದ್ದ ತಾಯಿ-ಮಗುವಿನಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆ ಅಪಾರ್ಟ್?ಮೆಂಟ್‌ನ ಸೀಲ್??ಡೌನ್ ಮಾಡಲಾಗಿದೆ.

ಜತೆಗೆ ಈ ಅಪಾರ್ಟ್???ಮೆಂಟ್?ನ ಎರಡು ಬದಿಯೂ ಬ್ಯಾರಿಕೇಡ್ ಅಳವಡಿಕೆ ಮಾಡಿ ರಾತ್ರಿ ಕಾವಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋಂಕಿತರಿದ್ದ ಅಪಾರ್ಟ್???ಮೆಂಟ್?? ಹೊರತುಪಡಿಸಿ ಬೇರೆಡೆ ಯಥಾಸ್ಥಿತಿ ಮುಂದುವರೆದಿದೆ.

ಅಪಾರ್ಟ್?ಮೆಂಟ್?ನಲ್ಲಿರುವವರಿಗೆ ಅಗತ್ಯ ವಸ್ತು ಪೂರೈಕೆ ಮಾಡಲು ಓರ್ವ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಇವರು ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೊರೈಕೆ ಮಾಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಸಂಜೆವಾಣಿಗೆ ತಿಳಿಸಿದರು.

ರಾ-ಪಿಡ್ ಪರೀಕ್ಷೆ: ಇನ್ನೂ ಸೋಂಕು ಪತ್ತೆಯಾದ ಪ್ರದೇಶ ವ್ಯಾಪ್ತಿಯ ನಿವಾಸಿಗಳಿಗೆ ಕೋವಿಡ್ ರಾ-ಪಿಡ್ ಪರೀಕ್ಷೆ ನಡೆಸಲು ಶಿಬಿರ ಆರಂಭಿಸಲಾಗಿದ್ದು, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.

ಮತ್ತೊಂದೆಡೆ ಅಪಾರ್ಟ್?ಮೆಂಟ್? ಸುತ್ತಮುತ್ತ ಪ್ರದೇಶದಲ್ಲಿ ಯಾರಿಗಾದರೂ ರೋಗದ ಗುಣಲಕ್ಷಣ ಇದ್ದರೂ, ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಅವರಿಗೆ ಆರ್?ಟಿಪಿಸಿಆರ್??ಗೂ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.