ಸೀಲ್‍ಡೌನ್ ಪ್ರದೇಶಗಳಿಗೆ ಸಚಿವ ನಾರಾಯಣಗೌಡ ಭೇಟಿ

ಕೆ.ಆರ್.ಪೇಟೆ.ಏ.02:ತಾಲೂಕಿನಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗಿ ಕಂಡು ಬಂದಿದ್ದು ಸೀಲ್‍ಡೌನ್ ಮಾಡಲಾಗಿರುವ ತಾಲೂಕಿನ ಚೌಡಸಮುದ್ರ ಮತ್ತು ಕೊಮ್ಮೇನಹಳ್ಳಿ ಗ್ರಾಮಗಳಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಚೌಡಸಮುದ್ರ ಗ್ರಾಮದಲ್ಲಿ 30 ಕ್ಕೂ ಹೆಚ್ಚು ಪಾಸಿಟಿವ್ ಸೋಂಕು ಪತ್ತೆಯಾಗಿದ್ದು ಕಂಡು ಬಂದಿದ್ದರೂ ಎಲ್ಲರೂ ಕೊರೋನಾ ಹೆಲ್ತ್ ಕೇರ್ ಸೆಂಟರ್‍ನಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳದೇ ನಾವು ಮನೆಯಲ್ಲಿಯೇ ಇದ್ದುಕೊಂಡು ಹೋಮ್ ಐಷುಲೇಶನ್ ಆಗಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತೇವೆ ಎಂದು ಊರಿಗೆ ವಾಪಸ್ ಬಂದವರು ಗ್ರಾಮದಲ್ಲಿ ಹೊರಗಡೆ ಓಡಾಡುತ್ತಾ ಸೋಂಕನ್ನು ಬೇರೆಯವರಿಗೆ ಹರಡುತ್ತಿರುವುದು ಸರಿಯಲ್ಲ
ಕೊರೋನಾ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾದ ಕೊಠಡಿಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯಬೇಕು ಇಲ್ಲವೇ ಕೋವಿಡ್ ಹೆಲ್ತ್ಕೇರ್ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸೋಂಕಿನ ತೀವ್ರತೆಯನ್ನು ಗಮನಿಸಿ ವೈದ್ಯರು ಏಳು ದಿನ ಇಲ್ಲವೇ ಹದಿನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಪಡಿಸಿ ಮನೆಗೆ ಕಳುಹಿಸುವವರೆಗೂ ಜಾಗರೂಕತೆಯಿಂದ ಇರಬೇಕು. ಆದರೆ ಚೌಡಸಮುದ್ರ ಗ್ರಾಮದಲ್ಲಿ ಸೋಂಕಿತರ ಪೈಕಿ ನಾಲ್ಕೈದು ಜನರು ಮಾತ್ರ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದುಕೊಂಡ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದ ಸೋಂಕಿತರೆಲ್ಲರೂ ಗ್ರಾಮದಲ್ಲಿಯೇ ತಿರುಗುತ್ತಿದ್ದಾರೆ ಇದು ಸರಿಯಲ್ಲ, ಗ್ರಾಮದ ಜನರು ಮತ್ತು ಸೋಂಕಿತರ ಆರೋಗ್ಯದ ದೃಷ್ಠಿಯಿಂದ ಕೂಡಲೇ ಸೋಂಕಿತರೆಲ್ಲರೂ ಹೆಲ್ತ್ಕೇರ್ ಸೆಂಟರ್‍ಗೆ ಮರಳಬೇಕು ಎಂದು ಚೌಡಸಮುದ್ರ ಗ್ರಾಮಸ್ಥರ ಮನವೊಲಿಸಿ ಆಂಬ್ಯುಲೆನ್ಸ್ಗಳಲ್ಲಿ ಶೆಟ್ಟಿನಾಯಕನಕೊಪ್ಪಲಿನಲ್ಲಿ ಸ್ಥಾಪಿಸಿರುವ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿದರು.
ಸೀಲ್‍ಡೌನ್ ಆಗಿರುವ ಕೊಮ್ಮೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು ಕೊರೋನಾ 2ನೇ ಅಲೆಯ ತೀವ್ರತೆಯು ಭಾರೀ ಜೋರಾಗಿದೆ. ಸೋಂಕಿತರು ಶ್ವಾಸಕೋಶದ ಸಮಸ್ಯೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಕೊಮ್ಮೇನಹಳ್ಳಿ ಗ್ರಾಮವೊಂದರಲ್ಲಿಯೇ ನಾಲ್ಕೈದು ಜನರು ಮೃತರಾಗಿದ್ದಾರೆ. ಹತ್ತಾರು ಜನರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಗ್ರಾಮಸ್ಥರು ಕೋರೋನಾ ಮುಂಜಾಗ್ರತಾ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕನ್ನು ಹಾಕಿಕೊಂಡು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಜನತಾಕಫ್ರ್ಯೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ತಹಶೀಲ್ದಾರ್ ಶಿವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಡಾ. ಜಯಂತ್, ತಾ.ಪಂ.ಕಾರ್ಯನಿರ್ವಾಹಕ ಅಧಿ ಕಾರಿ ಹೆಚ್.ಎನ್.ಚಂದ್ರಶೇಖರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್, ಸಬ್ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ, ಸುರೇಶ್, ಸಚಿವರ ಆಪ್ತಸಹಾಯಕರಾದ ದಯಾನಂದ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.