ಸೀರೆಯಲ್ಲಿ ಸಾರಾ ಮಿಂಚಿಂಗ್

ಬೆಂಗಳೂರು, ಏ.೯-ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ ಅವರು ಸೀರೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವೈಟ್ ಅಂಡ್ ಬ್ಲ್ಯೂ ಕಲರ್ ಕಾಂಬಿನೇಷನ್ ಸಾರಾ ಅವರಿಗೆ ಸುಂದರವಾಗಿ ಕಾಣ್ತಾ ಇದೆ. ಅದಕ್ಕೆ ತಕ್ಕ ಕಿವಿಯೋಲೆ ಧರಿಸಿ ಚೆಂದದ ನಗು ಬೀರಿದ್ದಾರೆ.
ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ. ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸೂಪರ್ ಆಗಿದೆ.ಸಾರಾ ಅಣ್ಣಯ್ಯ ಅವರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿದೆ. ನೀವು ತುಂಬಾ ಚೆಂದ ಕಾಣ್ತೀರಿ. ತೆರೆ ಮೇಲೆ ಸಹ ಇದೇ ರೀತಿ ಕಾಣಿಸಿಕೊಳ್ಳಿ ಎಂದು ಕಾಮೆಂಟ್ ಹಾಕಿದ್ದಾರೆ.
ನಟಿ ಸಾರಾ ಅಣ್ಣಯ್ಯ ಅವರು ಆಗಾಗ ಸೀರೆಗಳ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ರೇಷ್ಮೆ ಸೀರೆಗಳು ಅಂದ್ರೆ ತುಂಬಾನೇ ಇಷ್ಟ ಅಂತ ಹೇಳಿಕೊಂಡಿದ್ರು. ಅಲ್ಲದೇ ಸಿಂಪಲ್ ಸೀರೆ ಸಹ ಸಾರಾಗೆ ಮ್ಯಾಚ್ ಆಗುತ್ತೆ. ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಆಗಿ ಮಿಂಚಿದ್ರು. ಈಗ ದೀಪಿಕಾ ಆಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.