ಸೀನಿಯರ್ ಬಾಸ್ಕೇಟ್ ಬಲ್ ಚಾಂಪಯನ್ ಶಿಪ್ ಬಿ.ಕೆ.ಜಿ. ಗ್ಲೋಬಲ್ ಶಾಲೆ ದ್ವಿತಿಯ ಸ್ಥಾನ


ಸಂಜೆವಾಣಿ ವಾರ್ತೆ
ಸಂಡೂರು :ಜ:10:  ಇದೇ ತಿಂಗಳ 3 ದಿನಗಳವರೆಗೆ ಅಂದರೆ, ಜ. 6,7,8 ಮಹಾರಾಷ್ಟ್ರದ ರಾಥೋರ್‍ನಲ್ಲಿ ನಡೆದ 9ನೇ ಸೀನಿಯ್ ಬಾಸ್ಕೇಟ್ ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ಪುರುಷ ಮತ್ತು ಮಹಿಳೆಯರ ತಂಡಗಳು ಬಿ.ಕೆ.ಜಿ. ಗ್ಲೋಬಲ್ ಶಾಲೆಯಿಂದ ಭಾಗವಹಿಸಿ ಎರೆಡು ತಂಡಗಳು ದ್ವಿತಿಯ ಸ್ಥಾನಗಳನ್ನು ಪಡೆದಿರುತ್ತವೆ. ಮತ್ತು ಕರ್ನಾಟಕದ ಮಹಿಳಾ ಬಿ. ತಂಡದ ವಿಭಾಗ ತೃತೀಯ ಸ್ಥಾನ ಪಡೆದಿರುವುದಕ್ಕೆ ರಾಕೇಟ್ ಬಾಲ್ ಅಸೋಷಿಯೇಷನ್ ಆಫ್ ಕರ್ನಾಟಕಟದ ಅಧ್ಯಕ್ಷರಾದ ಬಿ. ನಾಗನಗೌಡರು. ಬಿ.ಕೆ.ಜಿ. ಕಛೇರಿಯಲ್ಲಿ ಪತ್ರಿಕಾ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.
ಪಂದ್ಯಾಳಿಯಲ್ಲಿ ಕರ್ನಾಟಕ ತಂಡಗಳು ದ್ವಿತಿಯ ಸ್ಥಾನವನ್ನು ಪಡೆದ ಆಟಗಾರರಿಗೆ ಹಾಗೂ ತಂಡಗಳ ಕೊಚ್ ಮತ್ತು ವ್ಯವಸ್ಥಪಕರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಆರ್. ಶ್ರೀನಿವಾಸ ಉಪಾಧ್ಯಕ್ಷರಾದ ವಿ. ಲಕ್ಷ್ಮಣ ಸಿದ್ದಾಪುರ, ಈಶ್ವರ ಬೊಮ್ಮನಹಾಳ್ ಕೊಪ್ಪಳ ಮತ್ತು ವೆಂಕಟಸುಬ್ಬಯ್ಯ ಸಂಡೂರು ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.