ಸೀತಿ ಹುಂಡಿಯಲ್ಲಿ 30 ಲಕ್ಷ ರೂ.

ಕೋಲಾರ, ಮೇ ೨೫:ತಾಲೂಕಿನ ವೇಮಗಲ್ ಸಮೀಪದ ಸೀತಿಯ ಶ್ರೀಪತೇಶ್ವರಸ್ವಾಮಿ ದೇವಾಲಯದ ಹುಂಡಿಎಣಿಕೆ ಮಂಗಳವಾರ ಮುಜರಾಯಿ ತಹಸಿಲ್ದಾರ್ ಬಿ.ನಾಗವೇಣಿ, ಸೀತಿ ಭೈರವೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಮುನೇಗೌಡ ನೇತೃತ್ವದಲ್ಲಿ ನಡೆಯಿತು.
೩೦ ಲಕ್ಷ ೨೬ ಸಾವಿರದ ೧೭೭ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅದೀಕ್ಷಕ ನವೀನ್, ಸುಬ್ರಮಣಿ, ಉಪತಹಸಿಲ್ದಾರ್ ಹೇಮಲತಾ, ಮಂಜುನಾಥ ಆಚಾರಿ ಇದ್ದರು.