’ಸೀತಾ’ ಫಿಲ್ಮ್ ಗಾಗಿ ಯಾರದೇ ಹೆಸರು ಘೋಷಿಸಿಲ್ಲ, ಕರೀನಾ ಆಲಿಯಾ ಹೆಸರು ಕೇವಲ ವದಂತಿ

ಕೆಲವು ಸಮಯದ ಮೊದಲು ಫಿಲ್ಮ್ ಮೇಕರ್ ಅಲೌಕಿಕ ದೇಸಾಯಿ ತಮ್ಮ ಹೊಸ ಪ್ರಾಜೆಕ್ಟ್ ’ಸೀತಾ: ದ ಇಂಕಾರ್ನೇಶನ್’ ಘೋಷಿಸಿದ್ದರು. ಇದರ ಕಥೆಯನ್ನು ಬಾಹುಬಲಿ ಖ್ಯಾತಿಯ ಕೆ. ವಿ. ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ .
ಇದರ ನಂತರ ನಿರಂತರವಾಗಿ ಒಂದು ಸುದ್ದಿ ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.ಏನೆಂದರೆ ಕರೀನಾ ಕಪೂರ್ ಅಥವಾ ಅಲಿಯಾ ಭಟ್ಟ್ ಈ ಫಿಲ್ಮ್ ನ ಲೀಡ್ ರೋಲ್ ಮಾಡಲಿದ್ದಾರೆ ಎಂದು. ಆದರೆ ಸ್ವತಹ ವಿಜಯೇಂದ್ರ ಪ್ರಸಾದ್ ಅವರೇ ಈ ಸುದ್ದಿಗಳನ್ನು ಖಂಡಿಸಿದ್ದಾರೆ. ಅವರು ಸಂದರ್ಶನವೊಂದರಲ್ಲಿ ತಿಳಿಸಿದಂತೆ “ಸೀತಾ ಪಾತ್ರದಲ್ಲಿ ಈತನಕ ಯಾರನ್ನೂ ಅಪ್ರೋಚ್ ಆಗಿಲ್ಲ .ನಾವು ಈಗ ಸ್ಕ್ರಿಪ್ಟ್ ಬರೆಯಲು ಆರಂಭಿ ಸಿದ್ದೇವೆ .ಇದು ಪೂರ್ಣಗೊಂಡ ನಂತರ ಯುವ ನಟಿಯನ್ನು ಹುಡುಕಲಾಗುವುದು ” ಎಂದಿದ್ದಾರೆ.

೨೦೨೧ ರಲ್ಲಿ ಬಾಲಿವುಡ್ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ ಸ್ಟಾರ್ ಕಿಡ್ಸ್ ಗಳು

೨೦೨೦ ರಲ್ಲಿ ಧೀರ್ಘ ಲಾಕ್ಡೌನ್ ಇದ್ದ ಕಾರಣ ಅನೇಕ ಸ್ಟಾರ್ ಕಿಡ್ಸ್ ಗಳು ಬಾಲಿವುಡ್ ಗೆ ತಮ್ಮ ಪ್ರವೇಶ ಮಾಡಲು ವಿಫಲರಾಗಿದ್ದರು. ಆದರೆ ಈ ವರ್ಷ ಕೆಲವು ಸ್ಟಾರ್ ಕಿಡ್ಸ್ ಗಳು ಫಿಲ್ಮ್ ನ ಮೂಲಕ ಬಾಲಿವುಡ್ ಪ್ರವೇಶಿಸುವ ತಮ್ಮ ಕನಸು ಸಾಕಾರಗೊಳಿಸಲು ಹೊರಟಿದ್ದಾರೆ.
ಈ ಸೂಚಿಯಲ್ಲಿ ಮೊದಲ ಹೆಸರು ಬಾಲಿವುಡ್ ನಟ ಸಂಜಯ್ ಕಪೂರ್ ಮಗಳು ಶನಾಯಾ ಕಪೂರ್ ಅವರದ್ದು.
ಶನಾಯಾ ಇವರನ್ನು ಫಿಲ್ಮ್ ಮೇಕರ್ ಕರಣ್ ಜೋಹರ್ ತಮ್ಮ ಫಿಲ್ಮ್ ಮೂಲಕ ಲಾಂಚ್ ಮಾಡಲಿದ್ದಾರೆ .ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಅವರೇ ತಿಳಿಸಿದ್ದಾರೆ.


ಕರಣ್ ಜೋಹರ್ ಶನಾಯಾರ ಒಂದು ವಿಡಿಯೋವನ್ನು ಶೇರ್ ಮಾಡಿ ಈ ಮಾತನ್ನು ಕನ್ಫರ್ಮ್ ಮಾಡಿದ್ದಾರೆ.
ಈ ವರ್ಷದಿಂದ ಜುಲೈ ಯಿಂದ ಶನಾಯಾ ತನ್ನ ಬಾಲಿವುಡ್ ಪ್ರಾಜೆಕ್ಟ್ ನ ಶೂಟಿಂಗ್ ಆರಂಭಿಸಲಿದ್ದಾರೆ. ಶನಾಯಾ ಕೂಡ ಈ ಮಾತಿನಿಂದ ಖುಷಿಗೊಂಡು ಕರಣ್ ಜೋಹರ್ ಗೆ ಧನ್ಯವಾದ ಹೇಳಿದ್ದಾರೆ.
ಶನಾಯಾ ಈಗಾಗಲೇ ಜಾನ್ಹವಿ ಕಪೂರ್ ಅಭಿನಯದ ಫಿಲ್ಮ್ ’ಗುಂಜನ್ ಸಕ್ಸೇನಾ ದ ಕಾರ್ಗಿಲ್ ಗರ್ಲ್’ ಇದರ ಅಸಿಸ್ಟೆಂಟ್ ನಿರ್ದೇಶಕರಾಗಿದ್ದರು. ಇತ್ತೀಚೆಗೆ ಶನಾಯಾ ತನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್ ಪಬ್ಲಿಕ್ ಮಾಡಿದ್ದರು. ಆನಂತರ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಫ್ಯಾನ್ಸ್ ಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ.
ಖುಷಿ ಕಪೂರ್:


ಜಾನ್ಹವಿ ಕಪೂರ್ ರ ತಂಗಿ, ಶ್ರೀದೇವಿ ಬೋನಿ ಕಪೂರ್ ರ ಎರಡನೆಯ ಮಗಳು ಖುಷಿ ಕಪೂರ್ ಕೂಡ ಫಿಲ್ಮ್ ಗೆ ಬರುವ ಸಾಧ್ಯತೆಗಳು ಚರ್ಚೆಯಾಗುತ್ತಿವೆ.
ಖುಷಿ ಬಹಳ ಗ್ಲಾಮರಸ್ ಮತ್ತು ಸ್ಟೈಲಿಶ್ ಆಗಿದ್ದಾರೆ .ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದಾರೆ .ಖುಷಿ ಈಗ ಅಮೇರಿಕಾದ ಒಂದು ಫಿಲ್ಮ್ ಮೇಕಿಂಗ್ ಸ್ಕೂಲ್ ನಲ್ಲಿ ಅಭಿನಯದ ಕೋರ್ಸ್ ಕಲಿಯುತ್ತಿದ್ದಾರೆ.
ಆಹಾನ ಪಾಂಡೆ:


ಅನನ್ಯಾ ಪಾಂಡೆಯ ಮಲ ಸಹೋದರ ಮತ್ತು ಚಂಕಿ ಪಾಂಡೆ ಸೋದರನ ಪುತ್ರ ಆಹಾನ ಪಾಂಡೆ ಈ ವರ್ಷ ಫಿಲ್ಮ್ ನಲ್ಲಿ ಎಂಟ್ರಿ ನೀಡಲಿದ್ದಾರೆ. ಅಹಾನ ಯಶ್ ರಾಜ್ ಫಿಲ್ಮ್ ಪ್ರೊಡಕ್ಷನ್ ಜೊತೆ ತನ್ನ ಕೆರಿಯರ್ ಆರಂಭಿಸಲಿರುವ ಸೂಚನೆ ಬಂದಿದೆ.
ಆರ್ಯನ್ ಖಾನ್:


ಶಾರುಖ್ ಖಾನ್ ರ ದೊಡ್ಡಮಗ ಆರ್ಯನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಜಬರ್ದಸ್ತ್ ಅಭಿಮಾನಿಗಳನ್ನು ಪಡೆದಿರುವರು. ಪ್ರತಿಯೊಬ್ಬರೂ ಶಾರುಖ್ ಖಾನ್ ಮಗನೂ ಅಭಿನಯ ಕ್ಷೇತ್ರಕ್ಕೆ ಬರಬೇಕು ಎಂದು ಕಾದು ನಿಂತಿದ್ದಾರೆ. ಈ ವರ್ಷ ಆರ್ಯನ್ ಕರಣ್ ಜೋಹರ್ ಅವರ ಅಪ್ ಕಮಿಂಗ್ ಫಿಲ್ಮ್ ’ಸ್ಟೂಡೆಂಟ್ ಆಫ್ ದಿ ಇಯರ್ ೩’ ಮೂಲಕ ಬಾಲಿವುಡ್ ಕೆರಿಯರ್ ಆರಂಭಿಸಬಹುದಾಗಿದೆ ಎನ್ನುತ್ತಾರೆ.

ಮಗಳ ಜೊತೆ ಅನುಷ್ಕಾಳ ಫೋಟೋ ವೈರಲ್

ಅಹ್ಮದಾಬಾದ್ ಏರ್ಪೋರ್ಟ್ ನಲ್ಲಿ ನಟಿ ಅನುಷ್ಕಾ ಶರ್ಮಾ ಕೈಯಲ್ಲಿ ಮಗುವನ್ನು ಹಿಡಿದು ನಡೆಯುತ್ತಿದ್ದರೆ ಹಿಂಬದಿಯಲ್ಲಿ ವಿರಾಟ್ ಕೊಹ್ಲಿ ಲಗೇಜನ್ನು ಎಳೆದುಕೊಂಡು ಬರುತ್ತಿರುವ ದೃಶ್ಯ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಮೊನ್ನೆ ರಾತ್ರಿ ವಿರಾಟ್ ಕೊಹ್ಲಿ ಮತ್ತು ಮಗಳು ವಾಮಿಕಾ ಜೊತೆಗೆ ಅಹ್ಮದಾಬಾದಿನ ಏರ್ಪೋರ್ಟ್ ನಲ್ಲಿ ಕಂಡಾಗ ಸಕತ್ತಾಗಿ ಜನ ಫೋಟೋ ಕ್ಲಿಕ್ಕಿಸಿದರು. ನಿನ್ನೆ ಮಂಗಳವಾರದಿಂದ ಭಾರತೀಯ ಕ್ರಿಕೆಟ್ ಟೀಮ್ ಇಂಗ್ಲೆಂಡ್ ವಿರುದ್ಧ ವನ್ ಡೇ ಮ್ಯಾಚ್ ಆರಂಭಿಸಿದ್ದು ಮೊದಲ ಪಂದ್ಯದಲ್ಲಿ ಗೆದ್ದಿದೆ.


ಈ ಸೀರೀಸ್ ಗಾಗಿ ಅಹ್ಮದಾಬಾದ್ ನಿಂದ ಮೊನ್ನೆ ಪುಣೆಗೆ ರಾತ್ರಿ ಕಾಲಕ್ಕೆ ಇವರೆಲ್ಲ ಬಂದಿದ್ದರು .ಇದು ಹಿಂದಿನ ದಿನದ ರಾತ್ರಿಯ ಫೋಟೋ .ವಿರಾಟ್ ಜೊತೆಗೆ ಹಾರ್ದಿಕ್ ಪಾಂಡ್ಯಾ ಪತ್ನಿ ನತಾಸಾ ಮಗುವಿನ ಜೊತೆಗೆ ಇದ್ದರು. ಟೀಮ್ ಇಂಡಿಯಾ ದ ಇತರ ಆಟಗಾರರೂ ಕೂಡ ಏರ್ಪೋರ್ಟ್ ನಲ್ಲಿ ಕಂಡುಬಂದರು.