
ಕಲಬುರಗಿ,ಫೆ 23: ಸೀತನೂರು ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಪವನ ಕುಮಾರ ಬಿ ವಳಕೇರಿ ಅವರ ನೇತೃತ್ವದಲ್ಲಿ ಗ್ರಾಮೀಣ ಉಪ ವಿಭಾಗ -1 ಮುಖ್ಯಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಸೀತನೂರು ಗ್ರಾಮದ ರೈತರುಅಲ್ಪ ಸ್ವಲ್ಪ ತರಕಾರಿ ಬೆಳೆಯುತ್ತಾರೆ.ವಿದ್ಯುತ 7 ಗಂಟೆಗಳ ವಿದ್ಯುತ್ ನೀಡುತ್ತೇವೆ0ದು ಅಧಿಕಾರಿಗಳು ಹೇಳುತ್ತಾರೆ.
ಆದರೆ ವಿದ್ಯುತ್ ಡಿವಲ, ಪದೇ ಪದೇ ಕರೆಂಟ, ಲೋಡ ಜಾಸ್ತಿಯಾಗಿ ವಿದ್ಯುತ್ ಸಂಪರ್ಕ ಕಟ್ ಆಗುತ್ತಿದೆ.ಟ್ರಾನ್ಸ್ ಫಾರ್ಮರ (ಟಿ ಸಿ ) ಐ. ಪಿ. ಸೆಟ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.ಸೀತನೂರ ಗ್ರಾಮಕ್ಕೆ ಕುಡಿಯುವ ನೀರಿನ ಸಂಗ್ರಹ ಪಂಪಹೌಸ್ ಗ್ರಾಮದಿಂದ 4 ಕಿ. ಮೀ. ದೂರವಿದ್ದು. ಪಂಪ್ ಆಪರೇಟರ್ ಗ್ರಾಮಕ್ಕೆ ಕುಡಿಯುವ ನೀರಿನ ಸ್ಟಾರ್ಟ್ ಮಾಡಿ ಗ್ರಾಮಕ್ಕೆ ಬರುವಷ್ಟರಲ್ಲಿ ಕರೆಂಟ್ ಹೋಗಿ ಬರುವುದು ಆಗುತ್ತದೆ. ಆದ್ದರಿಂದ ತೆರೆದ ಬಾವಿಯಲ್ಲಿ ನೀರು ಇದ್ದರೂವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಬೇಸಿಗೆ ಪ್ರಾರಂಭವಾಗುತ್ತಿದ್ದು ಕುಡಿಯುವ
ನೀರಿನ ಹಾಹಾಕಾರ ಆಗುತ್ತಿದೆ. ಕಲ್ಬುರ್ಗಿಯ ಜೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ತಿಳಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಆರು ತಿಂಗಳ ಹಿಂದೆ ಮುಖ್ಯ ಕಾರ್ಯನಿರ್ವಕ ಅಭಿಯಂತರರುಗ್ರಾಮೀಣ ಉಪ ವಿಭಾಗ 1 ಕಲ್ಬುರ್ಗಿ ಅವರಿಗೆ
ಕುಡಿಯುವ ನೀರಿಗಾಗಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಪವನ್ ಕುಮಾರ ಬಿ ವಳಕೇರಿ ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ.
ಬೇಡಿಕೆ ಈಡೇರದಿದ್ದರೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರ
ಕಚೇರಿ ಎದುರಿಗೆ ಮಾರ್ಚ 6 ರಂದು ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿಮಹಬೂಬ ಪಟೇಲ ಮಾಲಿ, ಖಾದರ ಸಾಬ ಧಗಾಪುರ, ರಜಾಕ ಸಂಕರೊಡಗಿ, ಕಬುಲಾ ಸಾಬ ಸಂಕರೊಡಗಿ, ಬಾವಾ ಸಾಬ ಮೋಜನ, ಜೆ
ಟ್ಟೆಪ್ಪ ಪೂಜಾರಿ, ಮಹಬೂಬ್ ಸಂಕರೊಡಗಿ, ಶೇರ ಅಲಿ ಹಡಗಿಲ, ರಾಜು ಜಮಾದಾರ್, ಸಂಕರೊಡಗಿ ಮಕ್ಬುಲ್ ಸಾಬ್, ಶಂಸೋದಿನ ಬಾಂಬೆ ಸೇಠ್ ಉಪಸ್ಥಿತರಿದ್ದರು