ಕಲಬುರಗಿ,ಮಾ.31: ಚಿತ್ರಕಲೆಯು ತನ್ನದೇ ಆದ ವೈಶಿಷ್ಠತೆ ಹೊಂದಿದೆ ಎಂದು ಶಾಸಕ ದತ್ತಾತ್ತ್ರೇಯ ಪಾಟೀಲ್ ರೇವುರ ಅಭಿಮತ ವ್ಯಕ್ತಪಡಿಸಿದರು.
ನಗರದ ಸೀತನೂರ ಸೀತನೂರ ಆರ್ಟ ಗ್ಯಾಲರಿಯಲ್ಲಿ ಗುರುವಾರ ಸಂಜೆ ಜರುಗಿದ ಮೋಹನ ಸೀತನೂರ ಅವರ ಕಲಾಯಾನದ ಹಿನ್ನೋಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲಾವಿದರೂ ಒಂದು ಚಿತ್ರ ಬಿಡಿಸಬೇಕಾದರೆ ಸಾಕಷ್ಟು ಕಷ್ಟ ಪಡುತ್ತಾರೆ. ಆದರೆ ಅವರ ಚಿತ್ರಗಳು ಮಾರಾಟವಾಗುವ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಅನುಭವಿಸಬೇಕಾಗುತ್ತದೆ. ಸಾರ್ವಜನಿಕರು ಚಿತ್ರಗಳನ್ನು ಖರೀದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ ಎಂ.ಎಸ್.ಮೂರ್ತಿ ಮಾತನಾಡಿ, ಕಲಾವಿದರೂ ಕುಟುಂಬದ ಕಡೆಗೆ ಗಮನ ಹರಿಸದೆ ಉತ್ತಮ ಚಿತ್ರಗಳನ್ನು ಬಿಡಿಸುತ್ತಾರೆ. ಒಂದು ಚಿತ್ರ ಬಿಡಿಸಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಚಿತ್ರಕಲಾವಿದರ ಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ ಕಳವಳ ವ್ಯಕ್ತಪಡಿಸಿದರು.
ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ಬ್ರಹ್ಮಪೂರ ಏಕದಂಡಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ವಂಶಸ್ಥ ಶ್ರೀಕೃಷ್ಣದೇವರಾಯಲು ಅವರು ಗ್ಯಾಲರಿ ಲೋಕಾರ್ಪಣೆ ಮಾಡಿದರು.
ಅಂತರಾಷ್ಟ್ರೀಯ ಕಲಾವಿದ ವಾಸುದೇವ ಕಾಮತ,ರಾಘವೇಂದ್ರ ಮೈಲಾಪುರ ಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ನಾಡೋಜ ಡಾ ಜೆ.ಎಸ್.ಖಂಡೇರಾವ ಅಧ್ಯಕ್ಷತೆವಹಿದ್ದರು. ಶಾಂತಾ ಭೀಮಸೇನರಾವ ಹಾಗೂ ಡಾ ಅಶೋಕ ಶಟಕಾರ ಕಾರ್ಯಕ್ರಮ ನಿರೂಪಿಸಿದರು. ಸೀತನೂರ ಪರಿವಾರದವರು ನಗರದ ಹಿರಿಯ ಕಿರಿಯ ಚಿತ್ರಕಲಾವಿದರು,ಸಾಹಿತಿಗಳು, ಗಣ್ಯರು ಮುಂತಾದವರು ಇದ್ದರು.
ಮೋಹನ ಸೀತನೂರ ಅವರ ಕಲಾಯಾನ ಹಿನ್ನೋಟ ಪ್ರದರ್ಶನವು ಏಪ್ರಿಲ್4 ರವರೆಗೆ ಬೆಳ್ಳಗ್ಗೆ 11-00ಗಂಟೆಯಿಂದ ಸಂಜೆ 7-00ಗಂಟೆವರೆಗೆ ಸಾರ್ವಜಿಕರು ಕಲಾಸ್ತಕರು ವಿಕ್ಷೀಸಬಹುದು ಎಂದು ಚಿರ್ತಕಲಾವಿದ ನಾರಾಯಣ ಎಂ ಜೋಶಿ ತಿಳಿಸಿದ್ದಾರೆ.