ಕಲಬುರಗಿ,ಜು.30: ಖ್ಯಾತ ಕಲಾವಿದರಾದ ಮೋಹನ್ ಸೀತುನೂರು ಅವರ ಎಚ್ ಕೆ ಆರ್ಟ್ ಗ್ಯಾಲರಿಗೆ ಕಲ್ಬುರ್ಗಿಯ ಖ್ಯಾತ ಉದ್ಯಮಿಗಳು ಭೇಟಿ ನೀಡಿ ಕಳಾಕೃತಿಗಳನ್ನು ವೀಕ್ಷಿಸಿದರು ಉದ್ಯಮಿಗಳನ್ನು ಸ್ವಾಗತಿಸಿದ ಮೋಹನ್ ಸೀತನೂರ್ ಅವರು ಮಾಡಿ ಗ್ಯಾಲರಿಗೆ ಉದ್ಯಮಿಗಳ ಭೇಟಿಯಿಂದ ಉತ್ತೇಜನ ದೊರಕಿದ್ದು ಕಲಾ ಕೃತಿಗಳ ಆಸ್ವಾಧನೆ ಮಾಡಿದ ಎಲ್ಲರಿಗೂ ಶುಭಾಶಯ ಕೋರಿ ಕಲೆ ಯಾವತ್ತು ವ್ಯಾಪಾರವಲ್ಲ ಅದು ಮನೋಭೂಮಿಕೆ ಕಟ್ಟಿಕೊಡುವುದರಿಂದ ಉದ್ಯಮಿಗಳು ಕಲಾ ಕೃತಿಗಳನ್ನು ತಮ್ಮ ವಾಣಿಜ್ಯ ಕೇಂದ್ರಗಳಲ್ಲಿ ಅಳವಡಿಸಿ ಗ್ರಾಹಕ ಸ್ನೇಹಿ ವಾತಾವರಣ ನಿರ್ಮಿಸಲು ಸಾಧ್ಯ ಎಂದರು. ಹಿರಿಯ ಉದ್ಯಮಿ ವೆಂಕಟೇಶ್ ಕಡೇಚೂರು ಮಾತನಾಡಿ ಕಲಾವಿದರ ಜೊತೆ ವಾಣಿಜ್ಯೋದ್ಯಮಿಗಳು ಸಂಪರ್ಕವನ್ನು ಇಟ್ಟುಕೊಂಡಾಗ ಕಲಾವಿದರ ಮತ್ತು ಸಂಸ್ಕೃತಿಯ ವಿಸ್ತರಣೆಗೆ ಅನುಕೂಲವಾಗುತ್ತದೆ. ಅಪೂರ್ವ ಕಲಾ ಕೃತಿಗಳನ್ನು ಉದ್ಯಮಿಗಳು ಪಡೆದು ವಾಣಿಜ್ಯ ಕೇಂದ್ರಗಳಲ್ಲಿ ಅಳವಡಿಸಿಕೊಂಡಾಗ ಸೌಹಾರ್ದ ಸಂಬಂಧ ಸೃಷ್ಟಿ ಸಾಧ್ಯ ಎಂದರು.
ಉದ್ಯಮಿಗಳಾದ ಶರಣಯ್ಯ ಗುತ್ತೇದಾರ,ಅಂಬಯ್ಯ ಗುತ್ತೇದಾರ, ರಾಜೇಶ್ ಡಿ.ಗುತ್ತೇದಾರ್,ಆಕಾಶ್ ವಿ .ಗುತ್ತೇದಾರ್, ಸುರೇಶ್ ಗುತ್ತೇದಾರ್, ಮಟ್ಟೂರು,ಅಬ್ದುಲ್ ಖಯ್ಯುಂ ಪೊಲೀಸ ಪಟೇಲ್,ಅಂಬರೀಶ್ ಕಲಾಲ್,ಆಕಾಶವಾಣಿಯ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾಕ್ಟರ್ ಸದಾನಂದ ಪೆರ್ಲ ಮತ್ತಿತರರು ಇದ್ದರು.ಮೋಹನ್ ಸೀತನೂರ್ ಉದ್ಯಮಿಗಳಿಗೆ ಗ್ಯಾಲರಿ ಮಾಹಿತಿ.ಕೈಪಿಡಿ ನೀಡಿ ಗೌರವಿಸಿದರು.ರಾಹುಲ್ ಸೀತಾನೂರ್, ಶ್ರೀಮತಿ ಸಮತಾ ಹಾಜರಿದ್ದರು.