ಸೀತನೂರಲ್ಲಿ ನೂತನ ಬಸ್ ಸೇವೆಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ

ಕಲಬುರಗಿ,ಆ.11: ಹೊರವಲಯದಲ್ಲಿರುವ ಸೀತನೂರ್ ಗ್ರಾಮದಲ್ಲಿ ಶುಕ್ರವಾರ ಹಬ್ಬದ ವಾತಾವರಣ ಕಂಡಿತ್ತು. ಕೊರೋನಾ ನಂತರ ಈ ಊರಲ್ಲಿ ಬಸ್ ಸೇವೆ ಇರಲೇ ಇಲ್ಲ. ಕಲಬುರಗಿಯಿಂದ 12 ಕಿಮೀ ದೂರವಿದ್ದರೂ ಬಸ್ ಸೇವೆ ಸ್ಥಗಿತವಾಗಿತ್ತು. ಆದರೆ ಊರವರ ಬೇಡಿಕೆಯಂತೆ ಶಾಸಕ ಅಲ್ಲಂಪ್ರಭು ಪಾಟೀಲ್ ಕೆಕೆಆರ್‍ಟಿಸಿಗೆ ಮಾತುಕತೆ ನಡೆಸಿ ಊರವರ ಸಂಕಷ್ಟ ಹೇಳಿ ಬಸ್ ಸೇವೆ ಪುನಾರಂಭವಾಗುವಂತೆ ಮಾಡಿದ್ದರು. ಇದರಿಂದಾಗಿ ಊರಲ್ಲಿ ಮನೆ ಮನೆಯಲ್ಲೂ ಸಂತಸ ಸಂಭ್ರಮ ಕಂಡಿತ್ತು.

ಕಲಬುರಗಿ ಮಹಾ ನಗರದ ಸೂಪರ್ ಮಾರ್ಕೆಟ್‍ನಿಂದ ಸೀತನೂರ್‍ವರೆಗೆ ನಿತ್ಯ ಬಸ್ ಸೇವೆ ಆರಂಭವಾಗಿದ್ದು ಶುಕ್ರವಾರ ಈ ಬಸ್ ಸೇವೆಗೆ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಚಾಲನೆ ನೀಡಿ ಜನಾರ್ಪಣೆ ಮಾಡಿದ್ದಾರೆ.

ಸೀತನೂರಲ್ಲಿ ಬಸ್‍ಗೆ ಪೂಜೆ ಸಲ್ಲಿಸಿದ ನಂತರ ಸ್ವತಃ ಶಾಸಕರೇ ಬಸ್ಸಿನಲ್ಲಿ ಸಂಚಾರ ಮಾಡಿದ್ದಾರೆ. ಇದರಿಂದಾಗಿ ಕಲಬುರಗಿಯಿಂದ ಸೀತನೂರ್‍ಗೆ ಬಸ್ ಸೇವೆ ನಿತ್ಯವೂ ಲಭ್ಯವಾದಂತಾಗಿದೆ.

ಈ ಸಂದರ್ಭದಲ್ಲಿ ಮುಖಂಡರಾದ ಪವನ ಕುಮಾರ್ ವಳಕೇರಿ, ಬಾಬೂರಾವ್, ಡೀಪೆÇೀ ಅಧಿಕಾರಿಗಳು ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಸೀತನೂರ್ ಗ್ರಾಮಸ್ಥರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸುಮಾರು ಎರಡು ವರ್ಷದಿಂದ ನೃಪತುಂಗ ಬಸ್ಸಿಗಾಗಿ ಹೋರಾಟ ಮಾಡಿದ ವಿದ್ಯಾರ್ಥಿಯರು ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರುಗಳು ಬಸ್ ಸೇವೆ ಆರಂಭವಾಗಿರೋದಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲರಿಗೆ, ಕೆಕೆಆರ್‍ಟಿಸಿಗೆ ಅಭಿನಂದಿಸಿದ್ದಾರೆ.

ಕಲಬುರಗಿ ತಾಲೂಕಿನ ಸೀತನೂರ ಗ್ರಾಮದ ಜನತೆ ಹಾಗೂ ಶಾಸಕ ಅಲ್ಲಂಪ್ರಭು ಪಾಟೀಲರ ಸತತ ಪ್ರಯತ್ನಕ್ಕೆ ಈ ಬಸ್ ಸೇವೆ ಪುನಾರಂಭದಿಂದಾಗಿ ಜಯ ಸಿಕ್ಕಂತಾಗಿದೆ. ಂದು ಸೀತನೂರು ಗ್ರಾಮಕ್ಕೆ ಆಗಮಿಸಿ ನೃಪತುಂಗ ಬಸ್ ಶಾಸಕರು ಚಾಲನೆ ನೀಡಿದಾಗ ಊರವರು ಜಯಘೋ, ಹಾಕಿದರು.

ಬಸ್ ಸೇವೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಲಿಂಗರಾಜ ಕಣ್ಣಿ, ಬಾಬುರಾವ್ ಪೆÇಲೀಸ್ ಪಾಟೀಲ್, ಅರ್ಮೀ ಪಟೇಲ್ ಮಾಲಿ, ಆರೀಫ್ ನಬಿ ಪಟೇಲ್, ಗೌತಮ್ ಶೃಂಗೇರಿ, ಖಾರ್ದ ಸಾಬ್, ಸಂಗನಗೌಡ, ಮಹಬೂಬ್ ಪಟೇಲ್ ಮಾಲಿ, ಗ್ರಾಮಸ್ಥರು ಉಪಸ್ಥಿತರಿದ್ದರು.