ಸೀಟ್ ಬೆಲ್ಟ್ ಧರಿಸದ ಚಾಲಕ ಪ್ರಯಾಣಿಕರಿಗೆ ಬಿಸಿ

ಬೆಂಗಳೂರು,ಮೇ.೧೭-ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸಿದ ವಾಹನ ಚಾಲಕರು ಪ್ರಯಾಣಿಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸಿದ ಸವಾರರ ಮೇಲೆ ಕೇಸ್ ದಾಖಲಿಸಲಾಗಿದ್ದು ಕೇವಲ ೧೬ ದಿನದಲ್ಲಿ ೧೨ ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಮೇ ೧ ರಿಂದ ಮೇ ೧೬ರ ವರೆಗೆ ಹೆದ್ದಾರಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ೧೨,೧೯೨ ಕೇಸ್‌ಗಳನ್ನು ದಾಖಲಿಸಲಾಗಿದೆ.
ಕಾರು ಚಾಲಕ ಸೀಟ್ ಬೆಲ್ಟ್ ಧರಿಸದೇ ಚಾಲನೆ ಮಾಡಿರುವುದು ಹಾಗೂ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಕೂಡ ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡುವುದು ಹೀಗೆ ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದಕ್ಕೆ ಕೇಸ್ ಹಾಕಲಾಗಿದೆ.
ಕೇಸ್ ದಾಖಲಿಸಿ ಕಾರು ಮಾಲೀಕನ ವಿಳಾಸಕ್ಕೆ ನೋಟಿಸ್ ಕಳಿಸಲಾಗಿದೆ. ನೋಟಿಸ್ ಮಾಡಿದ ಏಳು ದಿನದಲ್ಲಿ ಸಂಚಾರಿ ಠಾಣೆಗೆ ಹೋಗಿ ದಂಡ ಪಾವತಿಗೆ ಸೂಚನೆ ನೀಡಲಾಗಿದ್ದು ದಂಡ ಕಟ್ಟದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.