ಸೀಕಿಂದ್ರಾನಿಂದ, ರಾಯಚೂರು-ತುಮಕೂರವರೆಗೆ ಹೊಸ ರೈಲು

ರಾಯಚೂರು,ಏ.೦೪- ರಾಯಚೂರಿನಿಂದ ತುಮಕೂರವರೆಗೆ ಹೊಸ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೈಲು ನಂಬರ್ ೦೭೨೩೩ ಆಗಿದ್ದು, ಇದು ಸೀಕಿಂದ್ರಾಬಾದಿಂದ ಹೊರಟು ಮಹೆಬೂಬನಗರ, ಗದ್ವಾಲ, ರಾಯಚೂರು, ಅನಂತಪುರ, ಯಲಹಂಕ, ಮೂಲಕ ತುಮಕೂರ ಅರಸಿಕೇರಾಕ್ಕೆ ತೆರಳುತ್ತದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕೆಂದು ಬಾಬುರಾವ್ ತಿಳಿಸಿದರು.
ಇದು ದಿ. ೬. ರಾತ್ರಿ ೮ ಗಂಟೆಗೆ ಸೀಕಿಂದ್ರಾಬಾದ ಬಿಟ್ಟು ದಿ.೭ ರಂದು ರಾತ್ರಿ ೧.೫ ನಿಮಿಷಕ್ಕೆ ರಾಯಚೂರಗೆ ಬರುತ್ತದೆ.ಎಂದು ಬಾಬುರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರ ಜನತೆಗೆ ತುಮಕೂರಿನ ಸುಕ್ಷೇತ್ರ ಸಿದ್ದಗಂಗಾ ಮಠಕ್ಕೆ ತೆರಳಲು ಅನುಕೂಲವಾಗಲೆಂದು ಸಂಸದ ರಾಜಾ ಅಮರೇಶ್ವರ ನಾಯಕ ವಿಶೇಷ ಉತ್ಸುಕತೆಯಿಂದ ಇದರ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.