ಸಿ-20 ಆಧಾರಿತ ತರಬೇತಿ ಕಾರ್ಯಾಗಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಬಳ್ಳಾರಿಯ ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ
ಪಾಲಿಟೆಕ್ನಿಕ್‍ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಹೊಸ ಪಠ್ಯಕ್ರಮ ಅ-20 ಆಧಾರಿತ ತರಬೇತಿ
ಕಾರ್ಯಗಾರವನ್ನು ಪ್ರಾರ್ಥನಾ ಗೀತೆ ಮತ್ತು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈಶ್ವರ ಗೌಡ
ಹೆಚ್.(ಂಅಅಇಂ) ಅಧ್ಯಕ್ಷರು, ಜಿ.ಬಸವರಾಜಪ್ಪ ನಿವೃತ್ತ ಅಬಿಯಂತರರು ಪಿ.ಡಬ್ಲ್ಯು.ಡಿ ಬಳ್ಳಾರಿ, ಆರ್.ವೈ.ಎಂ.ಇ.ಸಿ ಕಾಲೇಜು ಬಳ್ಳಾರಿ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ ಹೆಚ್.ಎಂ.ಮಲ್ಲಿಕಾರ್ಜುನ ಡಾ.ಶೋಭ ಪ್ರೊಫೆಸರ್, ಡಾ.ಅದಾನಗೌಡ ಡಾ.ಸಚಿನ್ ಪಾಟೀಲ್ ಆಗಮಿಸಿದ್ದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್‍ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ಹಲಕುಂದಿ ವಿಜಯಕುಮಾರ್, ಎ.ವೀರನಗೌಡ, ಸಂಗನಕಲ್ ಚಂದ್ರಶೇಖರ್ , ಪ್ರಾಂಶುಪಾಲರಾದ ಡಾ. ಟಿ.ಎಂ.ವೀರಗಂಗಾಧರಸ್ವಾಮಿಯವರು ಸಿವಿಲ್ ವಿಭಾಗಾಧಿಕಾರಿ ಟಿ.ಗೋವಿಂದರಾಜುಲು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು ಹಾಜರಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್‍ಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತು ಜೀವನದಲ್ಲಿ ತಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ತಮ್ಮ ತಮ್ಮ ಭಾಷಣದಲ್ಲಿ ಡಿಪ್ಲೋಮಾ ಓದುವುದರಿಂದ ಅತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹಾಗೂ ಒಳ್ಳೆಯ ಹುದ್ದೆ ದೊರಕುವುದಲ್ಲದೆ ಜೀವನ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಯಾವುದೇ ಅಡ್ಡಿ ಆತಂಕಗಳು ಬಂದಾಗ ದೃತಿಗೆಡದೆ ಮುನ್ನುಗ್ಗಬೇಕು ತಮ್ಮ ಜಾಣ್ಮೆಯನ್ನು ಆಗಿಂದಾಗ್ಗೆ ನವೀಕರಿಸಿಕೊಳ್ಳಬೇಕು.ಯಾವುದೇ ಕಾರ್ಯಕ್ರಮವಿರಲಿ ಆರ್.ವೈ.ಎಂ.ಇ.ಸಿ ಕಾಲೇಜು ಬೆಂಬಲ ನೀಡುತ್ತಾ ಬಂದಿದೆ.
ಈ ಕಾರ್ಯಕ್ರಮದ ನಿರೂಪಣೆಯನ್ನು ಸಿವಿಲ್ ವಿಭಾಗದ ಉಪನ್ಯಾsಸಕಿಯಾದ ಶ್ರೀಮತಿ ಉಮ್ಮೆ ಸಲ್ಮಾ ನಡೆಸಿಕೊಟ್ಟರು ಮತ್ತು
ವಂದನಾರ್ಪಣೆಯನ್ನು ಉಪನ್ಯಾಸಕರಾದ ಶ್ರೀ. ರಾಜೇಶ್ ಕುಮಾರ್ ಜೆ.ಎಂ ಅವರು ನಿರ್ವಹಿಸಿದರು.