ಸಿ ಸಂಡೂರು ಇನ್ ಸೆಪ್ಟೆಂಬರ್


ಸಂಜೆವಾಣಿ ವಾರ್ತೆ
ಸಂಡೂರು :ಸೆ:12  ಬಳ್ಳಾರಿ ಜಿಲ್ಲೆಯ ಓಯಾಸಿಸ್, ಬಳ್ಳಾರಿಯ ಕಾಶ್ಮೀರ ಮತ್ತು ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್’ ಎಂದೇ ಹೆಸರುವಾಸಿಯಾದ ಸಂಡೂರು ಖನಿಜ ಸಂಪತ್ತು ಹಾಗೂ ದಟ್ಟ ಅರಣ್ಯಗಳಿಂದ ಸುತ್ತುವರೆಯಲ್ಪಟ್ಟಿದ್ದು, ಅಷ್ಟ ದಿಕ್ಕುಗಳಲ್ಲಿಯೂ ಅಮೃತಗೊಂಡ ರಾಮನಮಲೆ, ಉತ್ತರಮಲೆ, ಸ್ವಾಮಿ ಮಲೈ ಹಾಗೂ ಇನ್ನಿತರ ಬೆಟ್ಟಗಳ ಮಧ್ಯದಲ್ಲಿ ಕಣಿವೆಯಂತೆ ನೆಲೆಸಿದೆ.
ಬಳ್ಳಾರಿ ಬಿಸಿಲು ಎಂದೇ ಜನಜನಿತವಾಗಿರುವ ಜಿಲ್ಲೆಯಲ್ಲಿ ಮಲೆನಾಡಿನಂತಹ ಸಂಡೂರು ಒಂದು ಅಪವಾದವೇ ಸರಿ. ಪೌರಾಣಿಕ ಹಿನ್ನೆಲೆಯುಳ್ಳ ಅಂದರೇ ಚಾಲುಕ್ಯರ ಕಾಲದಲ್ಲಿ 8ನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ದೇಗುಲದ ಪಕ್ಕದಲ್ಲಿಯೇ ಪಾರ್ವತಿ ದೇವಿ ದೇವಸ್ಥಾನ ನಾಗನಾಥೇಶ್ವರ ಗುಡಿಗಳು ಪ್ರವಾಸಿಗಳಿಗೆ ಭಕ್ತಿಭಾವವನ್ನು ಮೂಡಿಸುತ್ತವೆ. ಈ ಕ್ಷೇತ್ರವು ಸಂಡೂರು ಪಟ್ಟಣದಿಂದ ಸರಿಸುಮಾರು 8 ಕಿ.ಮೀ, ದೂರದಲ್ಲಿದ್ದು, ಸರಕಾರಿ ಬಸ್ಸುಗಳನ್ನು ಹೊರತುಪಡಿಸಿ ಬೇರೆ ವಾಹನ ಸೌಕಯ್ಯಗಳು ಇರುವುದಿಲ್ಲ. ದೇವಸ್ಥಾನದಿಂದ ಕೆಳಗಿಳಿದು ಬರುವಾಗ 2 ಕಿ.ಮೀ. ದೂರದಲ್ಲಿ ಹರಿಶಂಕರ ದೇವಸ್ಥಾನವಿದ್ದು ಅಲ್ಲಿ ಕಲ್ಲಿನ ಗೋಮುಖದಿಂದ ಸತತವಾಗಿ 12 ತಿಂಗಳುಗಳ ಕಾಲ ನೀರು ನಿರಂತರವಾಗಿ ಶತ ಶತಮಾನಗಳಿಂದ ಇಂದಿಗೂ ಹರಿದುಬರುತ್ತಲೇ ಇದೆ.
1934ರಲ್ಲಿ ಮಹಾತ್ಮಗಾಂಧೀಜಿ ಯವರು ಸಂಡೂರಿಗೆ ಆಗಮಿಸಿದಾಗ ಇಲ್ಲಿನ ದಟ್ಟವಾದ ಕಾನನಗಳನ್ನು ನೋಡಿ  ‘ಸೀ ಸಂಡೂರು ಇನ್ ಸೆಪ್ಟೆಂಬರ್’ ಎಂದು ಉದ್ಘರಿಸಿದ್ದರು
ನಾರಿಹಳ್ಳ :- ಪಟ್ಟಣದಿಂದ 3 ಕಿ. ಮೀ. ದೂರದಲ್ಲಿರುವ ಹಾಗೂ ಮಾನಸ ಸರೋವರವೆಂತಲೇ ಖ್ಯಾತಿ ಪಡೆದ 2. ಬೆಟ್ಟಗಳ ನಡುವೆಯೇ ಹರಿಯುವ ನಾರಿಹಳ್ಳವು ವೀಕ್ಷಿಸಲು ಅಮೋಘವಾಗಿದೆ.
ಗಂಡಿನರಸಿಂಹ ಸ್ವಾಮಿ ದೇವಸ್ಥಾನ:- ಪಟ್ಟಣದಿಂದ 4 ಕಿ.ಮೀ. ದೂರದಲ್ಲಿರುವ ಕಲ್ಲು ಬೆಟ್ಟಗಳ ಮೇಲೆ ನೆಲೆಸಿರುವ ಈ ದೇವಸ್ಥಾನದಲ್ಲಿ ಸ್ವಯಂಭು ನರಸಿಂಹಸ್ವಾಮಿ ಹಾಗೂ ಲಕ್ಷ್ಮೀನರಸಿಂಹ ಮೂರ್ತಿ ಪ್ರವಾಸಿಗರಿಗೆ ಪ್ರಶಾಂತ ಸ್ಥಳವಾಗಿದೆ. ಒಂದು 1 ಕಿ.ಮೀ ಮುಂದೆ ಹೋದಂತೆ ಕಲ್ಲುಗಳಿಂದ ಆವೃತವಾದ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದ್ದು, ಅದರ ಮೇಲೆ ನಿಂತು ಪ್ರವಾಸಿಗಳು ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಬಹುದು ಹಾಗೂ ಈ ಪ್ರದೇಶವು ಟ್ರೆಕಿಂಗ್ ಸಾಹಸ ಕೈಗೊಳ್ಳಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.
ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿ ತಾರಾನಗರದ ರಸ್ತೆಗೆ ಹೊಂದಿಕೊಂಡಂತಹ ಕಾಡಿನಲ್ಲಿ ಕಾಲಭೈರವೇಶ್ವರ ದೇವಸ್ಥಾನವಿದ್ದು, ಪಕ್ಷದ ರಮಣೀಯ ವೇಶದಲ್ಲಿ ಕಾಲಭೈರವೇಶ್ವರ ದೇವಸ್ಥಾನ ಪ್ರಾಕೃತಿಕವಾಗಿ ನಿರ್ಮಿತಗೊಂಡ ಹೊಂಡವಿದ್ದು ಪ್ರವಾಸಿಗಳಿಗೆ ಮುದನೀಡುವ ಪ್ರೇಕ್ಷಣೀಯ ಸ್ಥಳವಾಗಿದೆ.
ಪಟ್ಟಣದಿಂದ ಕೇವಲ 28 ಕಿ.ಮೀ ದೂರದಲ್ಲಿ ವಿಶ್ವವಿಖ್ಯಾತ ಹಂಪಿಯಿದ್ದು ಆನೆಗುಂದಿ, ಟಿ.ಬಿ. ಡ್ಯಾಮ್, ಪಂಪಾವನ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಿದ್ದು 2 ದಿನಗಳ ಕಾಲ ಪ್ರವಾಸಿಗರು ಈ ಎಲ್ಲಾ ಪ್ರವಾಸಿ ಸ್ಥಳಗಳನ್ನು ಆನಂದಿಸಬಹುದಾಗಿದೆ. ಗುಡ್ಡ-ಗಾಡಿನಲ್ಲಿರುವ ಪ್ರದೇಶಗಳಲ್ಲಿ ವಾಹನ ಹಾಗೂ ಆಹಾರ ಸೌಲಭ್ಯವಿಲ್ಲದಿರುವುದರಿಂದ ಪ್ರವಾಸಿಗರು ತಮ್ಮ ತಮ್ಮ ವಾಹನ ವ್ಯವಸ್ಥೆಗಳನ್ನು (ಆಹಾರ ಮತ್ತು ನೀರು) ಮಾಡಿಕೊಂಡು ಬಂದಲ್ಲಿ ಇನ್ನೂ ಹೆಚ್ಚು ಆನಂದಿಸಬಹುದು.
ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಪ್ರವಾಸೋದ್ಯಮದಲ್ಲಿ ಅತೀವ ಆಸಕ್ತಿ ಹೊಂದಿರುವ ಶಾಸಕ ತುಕಾರಾಂ, ಇ ರವರು ರೋಪ್ ವೇ ನಿರ್ಮಾಣ ಮಾಡುವುದರ ಮೂಲಕ ಹಾಗೂ ಚಾರಣಪ್ರಿಯರಿಗೆ ಆರಣ್ಯದಲ್ಲಿಯೇ ಮಾರ್ಗ (ರೋಪ್ ವೇ) ಮಾಡುವ ಭರವಸೆಯಲ್ಲಿನಿಂತಿದ್ದಾರೆ.
ಇನ್ನು ಗಣಿಗಾರಿಕೆ ಸಂಪೂರ್ಣ ವೈಜ್ಞಾನಿಕವಾಗಿ ನಡೆಸಲ್ಪಟ್ಟರೆ ಹಾಗೂ ನಗರದಲ್ಲಿನ ರಸ್ತೆಗಳಲ್ಲಿ ಅದಿರು ತುಂಬಿದ ಲಾರಿಗಳ ಓಡಾಟವನ್ನು ಕಡ್ಡಾಯವಾಗಿ. ನಿಭರ್ಂಧಿಸಿದಲ್ಲಿ ಸಂಡೂರು, ಇಡೀ ಜಿಲ್ಲೆಯಲ್ಲಿಯೇ ಅತ್ಯುತ್ತಮ ಪೇಕ್ಷಣೀಯ ಸ್ಥಳ ವಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ತಾಲೂಕು ಆಡಳಿತ ತುರ್ತಾಗಿ ಗಮನಹರಿಸಬೇಕಿದೆ.