ಸಿ.ವಿ. ರಾಮನ್ ಕೊಡುಗೆ ಹಿರಿದು

ಬೀದರ್:ಫೆ.29: ವಿಜ್ಞಾನ ಕ್ಷೇತ್ರಕ್ಕೆ ಸಿ.ವಿ. ರಾಮನ್ ಕೊಡುಗೆ ಹಿರಿದಾಗಿದೆ ಎಂದು ಬಸವೇಶ್ವರ ಬಿ.ಎಡ್. ಕಾಲೇಜು ಉಪನ್ಯಾಸಕಿ ವೀಣಾ ಜಲಾದೆ ನುಡಿದರು.
ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೌತಶಾಸ್ತ್ರಜ್ಞ ಸಿ.ವಿ. ರಾಮನ್ ಅವರು ಸಂಶೋಧಿಸಿದ ‘ರಾಮನ್ ಪರಿಣಾಮ’ವು ಅಸಾಧಾರಣ ವೈಜ್ಞಾನಿಕ ಅನ್ವೇಷಣೆಯಾಗಿದೆ ಎಂದು ತಿಳಿಸಿದರು.
ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ರಾಮನ್ ಅವರಂತೆ ಶ್ರೇಷ್ಠ ವಿಜ್ಞಾನಿಯಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ನೋಬಲ್ ಪ್ರಶಸ್ತಿ ಪುರಸ್ಕøತ ಸಿ.ವಿ. ರಾಮನ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೊಸ ಬಗೆಯ ಆಲೋಚನೆ ಮಾಡಬೇಕು. ವಿಜ್ಞಾನ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಕವಿರತ್ನ ಕಾಳಿದಾಸ ಕಾಲೇಜು ಉಪನ್ಯಾಸಕ ಓಂಕಾರ, ಶಾಲೆಯ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ವಿದ್ಯಾರ್ಥಿಗಳಾದ ತಪಸ್ಯಾ, ಶಿವಾನಿ ಹಾಗೂ ದೃಷ್ಟಿ ಮಾತನಾಡಿದರು.
ಶಿಕ್ಷಕರಾದ ಮಾರುತೆಪ್ಪ, ನೀಲಮ್ಮ, ಸಾರಿಕಾ, ಪಲ್ಲವಿ, ಸುಮೀತ್, ಜ್ಯೋತಿ, ಪೂಜಾರಾಣಿ, ಶೈಲಜಾ, ಸುಜಾತಾ, ಭಾಗ್ಯಶ್ರೀ, ಪೂಜಾ, ಚಂದ್ರಕಲಾ, ಸುನೀತಾ ಇದ್ದರು. ಶಿಕ್ಷಕಿ ಅಲ್ಕಾವತಿ ಎಚ್. ನಿರೂಪಿಸಿದರು.
ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಬಿ.ಜಿ. ಮೂಲಿಮನಿ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.