ಸಿ.ಯು.ಕೆ.ನಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ

ಕಲಬುರಗಿ.ನ.7:ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರ್ಕಾರದ 84 ಲಕ್ಷ ರೂ. ಸಹಾಯದೊಂದಿಗೆ ಐ.ಸಿ.ಎಂ.ಆರ್ ಮತ್ತು ನಿಮ್ಹಾನ್ಸ್ ಅನುಮೋದನೆಯೊಂದಿಗೆ ಕೋವಿಡ್-19 ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷಾ ಸಾಮಥ್ರ್ಯವನ್ನು ಬಲಪಡಿಸಲು ಮತ್ತು ಹೆಚ್ಚಿನ ಜನರಿಗೆ ಸೇವೆ ಸಲ್ಲಿಸಲು ನೂತನವಾಗಿ ಸಿ.ಯು.ಕೆ.ನಲ್ಲಿ ಸ್ಥಾಪಿಸಲಾದ ಪ್ರಯೋಗಾಲಯ ತುಂಬಾ ಸಹಕಾರಿಯಾಗಲಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಎಚ್.ಎಂ. ಮಹೇಶ್ವರಯ್ಯ ಮಾತನಾಡಿ ಕೊರೋನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಲ್ಯಾಬ್ ತೆರೆಯುವ ಮೂಲಕ ರಾಷ್ಟ್ರಕ್ಕಾಗಿ ತನ್ನ ಸೇವೆ ಮುಂದುವರೆಸಿರುವುದು ಸಂತೋಷದ ವಿಷಯವಾಗಿದೆ. ಈ ಲ್ಯಾಬ್ ಭವಿಷ್ಯದಲ್ಲಿ ಸುಧಾರಿತ ರೋಗ ನಿರ್ಣಯ ಮತ್ತು ಸಂಶೋಧನಾ ಪ್ರಯೋಗಾಲಯವಾಗಿ ರೂಪಗೊಂಡು ಸುಸ್ಥಿರ ಮಾನವ ಆರೋಗ್ಯಕ್ಕೆ ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಲ್ಯಾಬ್‍ನಲ್ಲಿ ಐಸಿಎಂಆರ್ ಅನುಮೋದಿತ ಸಾಧನಗಳಾದ ಆರ್‍ಟಿ-ಪಿಸಿಆರ್, ಟ್ರೂನಾಟ್, ಆರ್‍ಎನ್‍ಎ ಐಸೊಲೇಷನ್ ಮೆಷಿನ್, ಬಯೋಸೆಫ್ಟಿ ಕ್ಯಾಬಿನೆಟ್‍ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ದಿನಕ್ಕೆ 200 ಮಾದರಿಗಳನ್ನು ಪರೀಕ್ಷಿಸುವ ಸಾಮಥ್ರ್ಯವಿದ್ದು, ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯದ 3 ಸಂಶೋಧನಾ ಸಹಾಯಕರು ಮತ್ತು 3 ಸಹಾಯಕ ಪ್ರಾಧ್ಯಾಪಕರು ಲ್ಯಾಬ್‍ಗಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾನಿಲಯವು ತನ್ನ ಆವರಣದಲ್ಲಿ ಯಾವುದೇ ಕೋವಿಡ್-19 ಮಾದರಿಗಳನ್ನು ಸಂಗ್ರಹಿಸುವುದಿಲ್ಲ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಕಳುಹಿಸಲಾದ ಮಾದರಿಗಳನ್ನು ಮಾತ್ರ ಇಲ್ಲಿ ಪರೀಕ್ಷಿಸಿ ಫಲಿತಾಂಶವನ್ನು ಮರಳಿ ಆಸ್ಪತ್ರೆಗೆ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಸಮಕುಲಪತಿ ಮತ್ತು ಸ್ಕೂಲ್ ಆಫ್ ಲೈಫ್ ಸೈನ್ಸ್ ವಿಭಾಗದ ಡೀನ್ ಪೆÇ್ರ. ಜಿ.ಆರ್.ನಾಯಕ್, ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನ ನೋಡಲ್ ಅಧಿಕಾರಿ ಡಾ.ರಾಕೇಶ್ ಕುಮಾರ್, ಡಾ.ರಾಸ್ಮಿತಾ ಸಮಲ್ ಮತ್ತು ಡಾ. ಕವಿಶಂಕರ್ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.