ಸಿ.ಮುನಿರಾಜುಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಕೋಲಾರ,ಸೆ.೫- ಶಿಕ್ಷಕರ ದಿನಾಚರಣೆಯ ನಿಮಿತ್ತ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐತರಾಸನಳ್ಳಿ, ಕೋಲಾರ ತಾಲೂಕು, ಕೋಲಾರ ಜಿಲ್ಲೆಯ ವಿಜ್ಞಾನ ಸಹ ಶಿಕ್ಷಕರಾದ ಸಿ ಮುನಿರಾಜು ರವರು ಭಾಜನರಾಗಿದ್ದಾರೆ.
೧೩/೬/೨೦೦೭ ರಂದು ವಿಜ್ಞಾನ ಸಹ ಶಿಕ್ಷಕರಾಗಿ ನೇಮಕವಾದ ಇವರು ಮಕ್ಕಳ ವಿಜ್ಞಾನ ಹಾಗೂ ಗಣಿತ ವಿಷಯಗಳ ಪರಿಣಾಮಕಾರಿಯಾದ ಕಲಿಕೆಗೆ ಪೂರಕವಾಗಿ ಗಣಿತ ಹಾಗೂ ವಿಜ್ಞಾನ ಪ್ರಯೋಗಾಲಯ ನಿರ್ಮಾಣ, ವಿಜ್ಞಾನ ಹಾಗೂ ಗಣಿತ ಕ್ಲಿಷ್ಟ ಪರಿಕಲ್ಪನೆಗಳ ಸುಲಭ ಕಲಿಕೆಗಾಗಿ ಸಾವಿರಾರು ಕಲಿಕೋಪಕರಣಗಳ ತಯಾರಿಕೆ, ಶಾಲೆಯ ಭೌತಿಕ ಸೌಲಭ್ಯ ಗಳ ಉನ್ನತಿಗಾಗಿ ಧಾನಿಗಳಿಂದ ಸುಮಾರು ೨ಲಕ್ಷ ಮೌಲ್ಯದ ಉಪಕರಣ ಸಂಗ್ರಹ,ಪರಿಣಾಮಕಾರಿ ಬೋಧನಾ ವಿಧಾನಗಳ ಅಳವಡಿಕೆಯ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಇವರ ಶಾಲೆಯ ಮಕ್ಕಳು ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಶಿಕ್ಷಕರು ರಾಜ್ಯಮಟ್ಟದ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದು ಕರೋನ ಸಂಕಷ್ಟ ಕಾಲದಲ್ಲಿ ಚಂದನ ಟಿವಿ ಯಲ್ಲಿ ವಿಜ್ಞಾನ ಪಾಠ ಮಾಡುವುದರ ಮೂಲಕ ರಾಜ್ಯದ ಮಕ್ಕಳ ಪ್ರೀತಿಯ ವಿಜ್ಞಾನ ಶಿಕ್ಷಕರಗಿದ್ದಾರೆ. ಅಲ್ಲದೆ ಇವರಿಗೆ ಎಷ್ಯಾ ಬುಕ್ ಆಫ್ ರೆಕಾರ್ಡ್ಸ್, ಗುರುಶ್ರೇಷ್ಠ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಇವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದು ಶ್ಲಾಘನಿಯವಾಗಿದೆ.
ಇವರಿಗೆ ಐತರಾಸನಹಳ್ಳಿ ಶಾಲೆಯ ಮಕ್ಕಳು, ಶಿಕ್ಷಕ ವರ್ಗ, ಹಾಗೂ ಕೋಲಾರ ತಾಲ್ಲೂಕಿನ ಶಿಕ್ಷಕರು ಶುಭ ಕೋರಿದ್ದಾರೆ.