ಸಿ.ಬಿ.ಅಸ್ಕಿ ಸಾಮಾಜಿಕ ಸೇವೆ ಅನುಕರಣಿಯ:ಮನ್ಸೂರ

ತಾಳಿಕೋಟೆ:ಆ.12: ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಬಡತನವನ್ನು ಅನುಭವಿಸಿ ಬೆಳೆದುಬಂದಂತಹ ವ್ಯಕ್ತಿಯಾಗಿದ್ದಾರೆ ಮತ್ತು ಬಡವರ ಕಷ್ಟವನ್ನು ಅರೀತಂತಹ ವ್ಯಕ್ತಿಯಾಗಿದ್ದಾರೆ ಹೀಗಾಗಿ ಪ್ರತಿವರ್ಷ ಜನ್ಮ ದಿನದ ನಿಮಿತ್ಯ ಬಡವರ ಅನುಕೂಲಕ್ಕಾಗಿ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಆಸರೆಯಾಗುತ್ತಾ ಸಾಗಿದ್ದಾರೆಂದು ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಇಬ್ರಾಹಿಂ ಮನ್ಸೂರ ಅವರು ಹೇಳಿದರು.

ಶುಕ್ರವಾರರಂದು ಸಿ.ಬಿ.ಅಸ್ಕಿ ಅವರ 45ನೇ ಜನ್ಮ ದಿನದ ನಿಮಿತ್ಯವಾಗಿ ಅಸ್ಕಿ ಪೌಂಡೇಶನ್ ನೇತೃತ್ವದಲ್ಲಿ ಆಯೋಜಿಸಲಾದ ಬಡ ರೋಗಿಗಳಿಗೆ ಬ್ರೇಡ್, ಬೀಸ್ಕಿಟ್, ಹಣ್ಣು ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿ.ಬಿ.ಅಸ್ಕಿ ಅವರ ಸಮಾಜಿಕ ಸೇವೆ ಅನನ್ಯವಾಗಿದೆ ಪ್ರತಿವರ್ಷ ಜನ್ಮದಿನದ ಅಂಗವಾಗಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಉಚಿತ ನೇತ್ರ ತಪಾಸಣೆ, ಮತ್ತು ಉಚಿತ ಶಸ್ತ್ರ ಚಿಕೀತ್ಸೆಗಳು ಅಲ್ಲದೇ ಉಚಿತ ಆರೋಗ್ಯ ತಪಾಸಣೆ ಶಿಭಿರ ಮತ್ತು ರಕ್ತದಾನ ಶಿಬಿರ ಒಳಗೊಂಡು ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಡವರಿಗೆ ಒಂದಿಲ್ಲಾ ಒಂದು ರೀತಿ ಅನುಕೂಲ ಕಲ್ಪಿಸುವಂತಹ ಕಾರ್ಯ ಮಾಡುತ್ತಾ ಬಂದಿದ್ದಾರೆ ಈ ವರ್ಷವೂ ಕೂಡಾ ಮುದ್ದೇಬಿಹಾಳ ಪಟ್ಟಣದಲ್ಲಿ ಅಸ್ಕಿ ಪೌಂಡೇಶನ್ ನೇತೃತ್ವದಲ್ಲಿ ಇದೇ ತಿಂಗಳಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಿದ್ದಾರೆ ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅಸ್ಕಿ ಅವರಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಭಗವಂತನು ಕರುಣಿಸಲಿ ಎಂದು ಆಶಿಸಿದರು.

ಇನ್ನೋರ್ವ ಅಸ್ಕಿ ಪೌಂಡೇಶನ್ ಉಪಾಧ್ಯಕ್ಷ ವೀರೇಶರೆಡ್ಡಿ ಅಸ್ಕಿ ಅವರು ಮಾತನಾಡಿ ಯಾವುದೇ ಜಾತಿ ಬೇದ ಭಾವವಿಲ್ಲದೇ ಎಲ್ಲರೂ ನನ್ನವರು ಎಂದು ಪ್ರೀತಿಸುವ ಗುಣಹೊಂದಿರುವ ಸಿ.ಬಿ.ಅಸ್ಕಿ ಅವರು ಕೇವಲ ಜನ್ಮದಿನದ ಅಂಗವಾಗಿ ಅಷ್ಟೇ ಅಲ್ಲದೇ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಂತಹ ವ್ಯಕ್ತಿಯಾಗಿದ್ದಾರೆ ರಂಜಾನ್ ಹಬ್ಬದ ಸಂದರ್ಬದಲ್ಲಿಯೂ ಕೂಡಾ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಅಷ್ಟೇ ಅಲ್ಲದೇ ಕೊಣ್ಣೂರ ಗ್ರಾಮ ಒಳಗೊಂಡು ವಿವಿಧ ಗ್ರಾಮಗಳಲ್ಲಿ ಇಪ್ತಿಯಾರ ಕೂಟವನ್ನು ಆಯೋಜಿಸಿ ಮುಸ್ಲಿಂ ಬಾಂದವರ ಪ್ರೀತಿಗೆ ಭಾಜನರಾಗಿದ್ದಾರೆ ಮತ್ತು ಅನೇಕ ಬಡ ಜನರ ಅನುಕೂಲಕ್ಕೆ ತಮ್ಮ ಕೈಲಾದ ಸಹಾಯ ಹಸ್ತವನ್ನು ಚಾಚುತ್ತಾ ಸಾಗಿರುವ ಇವರು ಈ ವರ್ಷವೂ ಕೂಡಾ ಜನ್ಮ ದಿನದ ಅಂಗವಾಗಿ ಈ ತಿಂಗಳಿನಲ್ಲಿ ವಿವಿಧ ಬಡ ಜನರ ಅನುಕೂಲಕರ ಕಾರ್ಯಕ್ರಮಗಳನ್ನು ಆಯೋಜಿಸಲು ತಿರ್ಮಾನಿಸಲಾಗಿದೆ ಎಂದರು.

ಅಸ್ಕಿ ಪೌಂಡೇಶನ್ ಪದಾಧಿಕಾರಿಗಳು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಮೂದಾಯ ಆರೋಗ್ಯ ಕೇಂದ್ರ ಮತ್ತು ಶ್ರೀ ಸಾಯಿ ಆಸ್ಪತ್ರೆ ಒಳಗೊಂಡು ವಿವಿಧ ಆಸ್ಪತ್ರೆಗಳಿಗೆ ತೆರಳಿ ಬ್ರೇಡ್ ಬೀಸ್ಕಿಟ್, ಹಣ್ಣು ಹಂಪಲಗಳನ್ನು ನೀಡಿ ವಿನೂತನವಾಗಿ ಸಿ.ಬಿ.ಅಸ್ಕಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದರು.

ಈ ಸಮಯದಲ್ಲಿ ಸಮೂದಾಯ ಆರೋಗ್ಯ ಕೇಂದ್ರದ ವೈಧ್ಯರಾದ ಡಾ.ಆಯ್.ಬಿ.ತಳ್ಳೊಳ್ಳಿ, ಡಾ.ಶ್ರೀಶೈಲ ಹುಕ್ಕೇರಿ, ಸಾಯಿ ಆಸ್ಪತ್ರೆಯ ಡಾ.ಶ್ರೀಮತಿ ಗಂಗಾಂಬಿಕಾ ಪಾಟೀಲ, ಅಸ್ಕಿ ಪೌಂಡೇಶನ್ ಕಾರ್ಯಕರ್ತರಾದ ಯಲ್ಲಪ್ಪ ಮಾದರ, ಅಶೋಕ ನಾಯ್ಕೋಡಿ, ದ್ಯಾಮಣ್ಣ ಸೋಮನಾಳ, ಪ್ರಶಾಂತ ಜಲಪೂರ, ಬಡವರಾಜ ಚೀರಲದಿನ್ನಿ, ಮಹೇಶ ಅಸ್ಕಿ, ಮಡಿವಾಳಪ್ಪ ಮಡಿವಾಳರ, ಮಹ್ಮದ ವಾಲಿಕಾರ, ಕುಮಾರ ಐನಾಪೂರ, ಉಸ್ಮಾನ ಉತ್ನಾಳ, ರಮೇಶ ಅಸ್ಕಿ, ರಾಜು ಚಿರಕನಳ್ಳಿ, ಮೊದಲಾದವರು ಪಾಲ್ಗೊಂಡಿದ್ದರು.