ಸಿ.ಡಿ.ರಸ್ತೆ ಕಾಮಗಾರಿಗೆ ಒತ್ತಾಯ


ನವಲಗುಂದ,ಜೂ.1: ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮ ಪಕ್ಕ ಹಾದು ಹೋಗಿರುವ ಗದಗ-ನರಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಿ.ಡಿ ಸಣ್ಣ ಸೇತುವೆ ರಸ್ತೆ ಕಾಮಗಾರಿಯಾಗದೆ ಇರುವುದರಿಂದ ಇತ್ತೀಚಿಗೆ ಸುರಿದ ಮಳೆಯಿಂದ ಸುಮಾರು 50 ಎಕರೆ ಜಮೀನುಗಳಲ್ಲಿ ನೀರು ನಿಂತು ರೈತರಿಗೆ ತೊಂದರೆಯನ್ನುಂಟು ಮಾಡಿದೆ.
ಗದಗದಿಂದ ಶಲವಡಿ ಮಾರ್ಗದ ಎನ್.ಎಚ್.48 ರಸ್ತೆಯಾಗಿದ್ದು ರಸ್ತೆಯ ಕಾಮಗಾರಿ ಭಾಗಶ ಮುಗಿದಿರುತ್ತದೆ. ತುಪ್ಪದಕುರಹಟ್ಟಿ ಹತ್ತಿರ ಇರುವಂತಹ ರಸ್ತೆಗೆ ಹೊಂದಿಕೊಂಡ ಸಿ.ಡಿ ಕಾಮಗಾರಿ ಒಬ್ಬ ರೈತ ಅಡ್ಡಿ ಪಡಿಸಿದ್ದರಿಂದ ಐದಾರು ವರ್ಷಗಳಿಂದ ಸಿ.ಡಿಯಿಂದ ಹರಿದು ಹಳ್ಳಕ್ಕೆ ಹೋಗುವ ನೀರು ನಿಲ್ಲುವುದರಿಂದ ಈ ಭಾಗದಲ್ಲಿ ಬರುವಂತಹ ಸುಮಾರು ಜಮೀನುಗಳಲ್ಲಿ ನೀರು ನಿಂತು ಜಮೀನುಗಳು ಹಾಳುಗುತ್ತೇವೆ ಅಷ್ಟೇ ಅಲ್ಲದೇ ದಿನನಿತ್ಯ ದ್ವಿಚಕ್ರವಾಹನ ಇತರೆ ಬಾರಿ ವಾಹನಗಳು ಅಪಘಾತವಾಗುತ್ತವೆಂದು ಸಾರ್ವಜನಿಕರ ದೂರಾಗಿದೆ.
ರಾಜ್ಯ ಹೆದ್ದಾರಿಯಾಗಿದ್ದರು ಸಹ ಸರಕಾರ ಎಲ್ಲವನ್ನು ವಿಚಾರಿಸಿ ಹೆದ್ದಾರಿ ನಿರ್ಮಾಣ ಮಾಡುತ್ತಿರುತ್ತಾರೆ. ಇಲ್ಲಿ ಒಬ್ಬನ ತಕರಾರಿನಿಂದ ಸಾರ್ವಜನಿಕರ ಹಾಗೂ ಪಕ್ಕದ ಜಮೀನಿನ ರೈತರಿಗೆ ತುಂಬಾ ಲಾರದ ನಷ್ಟ ಅನುಭವಿಸುತ್ತಿದ್ದಾರೆ. ಪ್ರಯಾಣಿಕರಿಗೆ ತುಂಬ ತೊಂದರೆಯಾಗಿರುತ್ತದೆ. ರಾಜ್ಯ ಹೆದ್ದಾರಿಯಾದರು ಗುತ್ತಿಗೆದಾರರು ಕಾಮಗಾರಿಯನ್ನು ಮಾಡದೇ ಕುಂಟು ನೆಪ ಹೇಳುತ್ತಾ ಕಾಲಾಹರಣ ಮಾಡುತ್ತಿರುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಅನೇಕ ಅವಘಡಗಳು ಸಂಭವಿಸಿ ಜೀವಹಾನಿಯಾಗಿರುವಂತಹ ಉದಾಹರಣೆಗಳು ಬಹಳಷ್ಟೇವೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿರುತ್ತೇವೆ. ಆದರು ರೈತರ ಸಮಸ್ಯೆ ಬಗೆಹರಿದಿಲ್ಲ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಸಾರ್ವಜನಿಕರ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ತುಪ್ಪದಕುರಹಟ್ಟಿ ಗ್ರಾಮದ ನಿವಾಸಿ ಶ್ರೀಧರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದೆ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ರಾಜ್ಯ ಹೆದ್ದಾರಿಯಲ್ಲಿ ಈ ಮೊದಲಿನಿಂದಲೂ ಇದ್ದ ಹಾಗೆ ಸಿ.ಡಿ ನಿರ್ಮಾಣ ಮಾಡಿ ರಸ್ತೆಯನ್ನು ಮಾಡಿ ರೈತರಿಗೆ ಸಾರ್ವಜನಿಕರಿಗೆ ಇರುವಂತಹ ಸಮಸ್ಯೆ ಪರಿಹಾರ ಮಾಡಲು ಈ ಭಾಗದ ರೈತರು ಒತ್ತಾಯಿಸಿದ್ದಾರೆ.