ಸಿ.ಟಿ.ರವಿ ಹೇಳಿಕೆಗೆ ಚಕ್ರವರ್ತಿ ಖಂಡನೆ

(ಸಂಜೆವಾಣಿ ವಾರ್ತೆ)
ಶಹಾಪುರ:ಜೂ.8:ಅಂದು ಸಂವಿಧಾನ ರಚನೆ ಸಂಧರ್ಬದಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತು. ಅದಕ್ಕಾಗಿ ಅದನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಸಂವಿಧಾನ ಕುರಿತು ಅವಿವೇಕದ ಹೇಳಕೆಯನ್ನು ನೀಡಿದ ಸಿಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕರಾದ ಚಂದ್ರು ಚಕ್ರವರ್ತಿ ಆಗ್ರಹಿಸಿದ್ದಾರೆ.
ಭಾರತ ರತ್ನ ಡಾ.ಬಾಬಾಸಾಹೇಬರು ಬರೆದ ಈ ಸಂವಿಧಾನದ ಕುರಿತು ಉದ್ದಟತ್ತನದ ಹೇಳಿಕೆ ನೀಡಿ ಅವಮಾನಿಸಿದ್ದಾರೆ. ಮನುವಾದಿಯ ಗುಣವನ್ನು ಪ್ರದರ್ಶನ ಮಾಡಲು ಹೊರಟ ಈ ರವಿಯನ್ನು ಜಾತಿ ನಿಂಧನೆ ಕಾಯ್ದೆದಡಿಯಲ್ಲಿ ಬಂಧಿಸಬೇಕು. ಸಂಘಪರಿವಾರದ ಹೆಸರಿನಲ್ಲಿ ಹೇಳಕೆ ನೀಡಿ ಸಂವಿಧಾನ ರಚನೆ ಕುರಿತು ಪದೆ ಪದೆ ಕ್ಯಾತೆ ತೆಗೆಯುವ ಈ ಪರಿವಾರನ್ನು ಬ್ಯಾನ ಮಾಡಬೇಕು. ಅಂಬೇಡ್ಕರವರು ಸಂವಿಧಾನ ಬರೆದುದ್ದರಿಂದಲೆ ಇಂದು ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಆಡಳಿತ ಜಾರಿಯಲ್ಲಿದ್ದು. ಇಂದು ರವಿ ರಾಜಕಾರಣದಲ್ಲಿ ಕುಬೇರನಾಗಿ ಮಾತನಾಡುತ್ತಿರುವದು, ಅದನ್ನೆ ಮರೆತುಕೊಂಡು ಸಂವಿಧಾನ ಕುರಿತು ಬಿಜೆಪಿ ಸಂಘಪರಿವಾರ ಸಲ್ಲದ ಹೇಳಕೆ ನೀಡಿದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ, ಎಂದು ಅವರು ಪತ್ರಿಕಾ ಹೇಳಿಕೆಯ ಮುಖಾಂತರ ಸಿಟಿ ರವಿ ಹೇಳಿಕೆಯ ವಿರುದ್ದ ಖಂಡಿಸಿದರು.