ಸಿ. ಟಿ. ರವಿ ಕೂಡಲೇ ಕ್ಷಮೆ ಕೇಳಬೇಕು


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಸೆ.13  ವಿಪಕ್ಷ ನಾಯಕ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ದಾಖಲೆಗಳಿಲ್ಲದೇ ಅಶ್ಲೀಲವಾಗಿ ನಿಂದಿಸಿರುವ ಮಾಜಿ ಸಚಿವ ಸಿಟಿ ರವಿ ಮಾಜಿ ಸಿಎಂ ಸಿದ್ಧರಾಮಯ್ಯನವರ ಕ್ಷಮೆ ಯಾಚಿಸಬೇಕೆಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಯಸ್ಸಿನಲ್ಲಿ ಹಿರಿಯರಾದ ಹಾಗೂ ಮುತ್ಸದ್ದಿ ರಾಜಕಾರಿಣಿಗಳ ಬಗ್ಗೆ ಪೆದ್ದ ಎಂದು ನಾಲಿಗೆ ಹರಿಯಬಿಡುವ ಮೂಲಕ ತಮ್ಮ ವಿಕೃತ ಸಂಸ್ಕೃತಿಯನ್ನು ಪ್ರದರ್ಶನ ಮಾಡಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು
ವಿಪರೀತ ಕುಡಿದು ಮತ್ತಿನಲ್ಲಿ ವಾಹನ ಚಲಾಯಿಸಿ ಎರಡು ಜೀವ ಬಲಿ ಪಡೆದ ಮಾಜಿ ಸಚಿವ ಸಿಟಿ ರವಿ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಇಲ್ಲವೇ ಕುಡಿದ ನಶೆಯಲ್ಲಿ ಮಾತಾನಾಡುವುದನ್ನು ಬಿಡಿ ಇಲ್ಲದಿದ್ದರೆ ಜನತೆ ದಾರಿಯಲ್ಲಿ ಓಡಾಡಿಸಿ ಬಡಿದಾರು ಎಂದ ಪತ್ರೇಶ್ ತಕ್ಷಣವೇ ಸಿದ್ದರಾಮಯ್ಯ ಕ್ಷಮೆಯಾಚಿಸಲು ಒತ್ತಾಯಿಸಿದರು