ಸಿ.ಕೆ.ಶಿವರಾಮೇಗೌಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಕೆ.ಆರ್.ಪೇಟೆ, ನ.19: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಸಿ.ಕೆ.ಶಿವರಾಮೇಗೌಡ ಅವಿರೋಧವಾಗಿ ಆಯ್ಕೆಯಾದರು.
ಎನ್ ಜಯರಾಮು ರವರ ನಿವೃತ್ತಿಯಿಂದ ತೆರವಾಗಿದ್ದ ತಾಲ್ಲೂಕು ಅದ್ಯಕ್ಷರ ಹುದ್ದೆಗೆ ಇಂದು ಚುನಾವಣೆಯನ್ನು ನಿಗಧಿಗೊಳಿಸಲಾಗಿತ್ತು. ತೆರೆಮರೆಯ ಬೆಳವಣಿಗೆಯಲ್ಲಿ ಪದ್ಮೇಶ್ ಹಾಗೂ ಶಿವರಾಮೇಗೌಡ ಇಬ್ಬರೂ ಅದ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೆÇೀಟಿ ನಡೆಸಿದ್ದರು. ಎನ್.ಜಯರಾಮು ನಿವೃತ್ತರಾಗಿ ಉಳಿದಿರುವ ಮೂರುವರೆ ವರ್ಷಗಳ ಅವಧಿಯನ್ನು ಇಬ್ಬರಿಗೂ ಹಂಚಲು ಪದ್ಮೇಶ್ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಚಿವ ನಾರಾಯಣಗೌಡ ಚುನಾವಣೆ ನಡೆಯದೆ ಶಾಂತಿಯುತವಾಗಿ ನೌಕರವರ್ಗ ಹೋಗಬೆಕೆಂಬ ಉದ್ದೇಶದಿಂದ ಇಬ್ಬರಿಗೂ ಅವಕಾಶ ನೀಡುವ ಭರವಸೆ ನೀಡಿದ್ದರು ಸಚಿವ ನಾರಾಯಣಗೌಡರ ಆಶಯದಂತೆ ಇಂದು ಸರ್ವ ಸದಸ್ಯರ ಸಭೆ ಸೇರಿ ಒಮ್ಮತದ ತೀರ್ಮಾನ ಕೈಗೊಂಡ ಪರಿಣಾಮ ಮೊದಲ ಅವಧಿಗೆ ಸಿ.ಕೆ.ಶಿವರಾಮೇಗೌಡರನ್ನು ಅದ್ಯಕ್ಷರನ್ನಾಗಿ ನೇಮಕ ಮಾಡಲು ಸಭೆಯಲ್ಲಿ ನಿರ್ದೇಶಕರುಗಳು ತೀರ್ಮಾನಿಸಿದರು.
ಚುನಾವಣಾಧಿಕಾರಿಯಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಆರ್.ಡಿ.ದೇವರಾಜು,ಸಹಾಯಕ ಚುನಾವಣಾಧಿಕಾರಿಯಾಗಿ ನಾಗಮಂಗಲ ತಾ.ಸ.ನೌ.ಸಂಘದ ಅದ್ಯಕ್ಷ ಸಿ.ಜೆ.ಕುಮಾರ್, ಹಾಗೂ ಮಳವಳ್ಳಿ ತಾ.ಸ.ನೌ.ಸಂಘದ ಅದ್ಯಕ್ಷ ಹೆಚ್.ಮಲ್ಲಿಕಾರ್ಜುನಯ್ಯ ಕಾರ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಶಿವರಾಮೇಗೌಡ ಜಿಲ್ಲಾ ಉಸ್ತುವಾರಿ ಸಚಿವರ ಆಶಯದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ತಾಲ್ಲೂಕಿನ ಎಲ್ಲಾ ನೌಕರರ ಹಿತಾಸಕ್ತಿ ಕಾಪಾಡುವುದು, ಅವರುಗಳಿಗೆ ನ್ಯಾಯಯುತವಾಗಿ ಆಗಬೇಕಾಗಿರುವ ಕೆಲಸಗಳು, ಅವರ ರಕ್ಷಣೆ, ಇಲಾಖೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಶಂಭೂಗೌಡ, ಕಾರ್ಯದರ್ಶಿ ಆನಂದಕುಮಾರ ತಾ.ಗೌರವಾಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷರುಗಳಾದ ಪಿ.ಜೆ.ಕುಮಾರ್, ಎ.ಜೆ.ರಮೇಶ್, ಪದಾಧಿಕಾರಿಗಳಾದ ಮಂಜುನಾಥ್, ಡಿ.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.