ಸಿ.ಒ.ಡಿ.ಪಿಯಲ್ಲಿ ದೀಪಾವಳಿ ಆಚರಣೆ

ಮಂಗಳೂರು, ನ.೧೯- ದಿನಾಂಕ ೧೭.೧೧.೨೦೨೦ ರಂದು ಸಿ.ಒ.ಡಿ.ಪಿ ಸಂಸ್ಥೆಯ ಸಿಬ್ಬಂಧಿ ವರ್ಗದವರಿಂದ ದೀಪಾವಳಿ ಆಚರಣೆಯನ್ನು ಸಿ.ಒ.ಡಿ.ಪಿಯ ಸಂಭಾಗಣದಲ್ಲಿ ಆಚರಿಸಲಾಯಿತು. ಈ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಫಾ| ಓಸ್ವಲ್ಡ್ ಮೊಂತೇರೊ ವಹಿಸಿ, ದೀಪಾವಳಿಯ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಲೋಮಿನಾ ಕಾಲೇಜು ಪುತ್ತೂರು ಪ್ರಾಶುಂಪಾಲರಾದ ಫಾ| ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಸಿಒಡಿಪಿ ಸಂಸ್ಥೆಯ ಸಹ ನಿರ್ದೇಶಕರಾದ ಫಾ| ವಿನ್ಸೆಂಟ್ ಡಿಸೋಜ, ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ರೀನಾ ಮತ್ತು ಕಾರ್ಯಕರ್ತೆಯಾದ ಶ್ರೀಮತಿ ಮಮತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕರ್ತೆಯಾರದ ಶ್ರೀಮತಿ ರೇವತಿಯವರು ನಿರೂಪಿಸಿದರು ಹಾಗೂ ಶ್ರೀಮತಿ ವಾಣಿರವರು ವಂದಾನರ್ಪನೆಗೈದರು.