
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.02: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಬಳ್ಳಾರಿ ತಾಲೂಕ ಸಮಿತಿ ಯಿಂದ ಕಾರ್ಮಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಗಾಂಧಿ ಭವನಯಿಂದ ಈಡಿಗ ಹಾಸ್ಟೆಲ್ ವರೆಗೂ ಮೆರವಣಿಗೆ ಆಯೋಜಿಸಲಾಗಿತ್ತು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಜೆ ಸತ್ಯ ಬಾಬು ಭಾಗವಹಿಸಿ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದರು. ಕನಿಷ್ಠ ವೇತನ ಜಾರಿ ಮಾಡಲು ಹೋರಾಟ ನಡಸಬೇಕು , 12 ತಾಸು ಕೆಲಸದ ಅವಧಿ ಹೆಚ್ಚಿಸಲು ಮುಂದಾಗಿದ್ದು ಮಹಿಳೆಯರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿ ಕೊಳ್ಳಲು ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆ ಜಾರಿಗೆ ತರಲು ಹೊರಟಿದೆ ಇದನ್ನು ವಿರೋಧಿಸಬೇಕು ಎಂದರು.
ಬಳ್ಳಾರಿ ತಾಲೂಕ ಸಂಚಾಲಕ ಎಂ ತಿಪ್ಪೇಸ್ವಾಮಿ, ಜನವಾದಿ ರಾಜ್ಯ ಜಂಟಿ ಕಾರ್ಯ ದರ್ಶಿ ಜೆ ಚಂದ್ರ ಕುಮಾರಿ ಮಾತನಾಡಿ, ಮಹಿಳೆಯರು ತಮ್ಮ ಹಕ್ಕು ಗಳಾಗಾಗಿ ರಾಜಿ ಇಲ್ಲದೆ ಹೋರಾಟ ನಡೆಸಬೇಕು ಮಹಿಳೆಯರಿಗೂ ಸಮಾನ ವೇತನೆ ನೀಡದೆ ವಂಚನೆ ಮಾಡುತ್ತಿದ್ದು ಹೋರಾಟದ ಮುಖಾಂತರ ಮಹಿಳೆಯರು ಸಮಾನತೆ ಸಾಧಿಸಬೇಕು ಎಂದರು. ಶ್ರೀಮತಿ ಪದ್ಮ ಅಕ್ಷರ ದಾಸೋಹ ಮುಖಂಡರು ಕಪ್ಪಗಲ್ ಅಕ್ಷರ ದಾಸೋಹ ಮುಖಂಡರು ಈಶ್ವರಮ್ಮ, ಶ್ರೀಮತಿ ಹುಸಿನೆಬೀ, ಮಲ್ಲಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.