ಸಿ.ಐ.ಟಿ.ಯು.ಕಚೇರಿ: ವಿಶ್ವ ಕಾರ್ಮಿಕ ದಿನಾಚರಣೆ

ರಾಯಚೂರು, ಮೇ.೧- ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಗರದ ಸಿ.ಐ.ಟಿ.ಯು. ಕಚೇರಿಯಲ್ಲಿ ನೆರವೇರಿಸಲಾಯಿತು.ಧ್ವಜಾರೋಹಣವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ ನೆರವೇರಿಸಿದರು.
ನಂತರ ಮಾತನಾಡಿದ ಅವರು ಕಾರ್ಮಿಕರು ತಮ್ಮ ಪ್ರಾಣ ಬಲಿದಾನದಿಂದ ಪಡೆದ ಕಾರ್ಮಿಕ ಕಾನೂನುಗಳನ್ನು ಇಂದು ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ದೇಶದ ಕಾರ್ಮಿಕರನ್ನು ಕಾರ್ಪೊರೇಟ್ ಕಂಪನಿಗಳ ಗುಲಾಮರನ್ನಗಿ ಮಾಡಲು ಮದಾಗಿದ್ದಾರೆ ಎಂದರು.
ಕೇಂದ್ರ ಬಿಜೆಪಿ ಪಕ್ಷ ಕಾರ್ಮಿಕ ವಿರೋಧಿ ನೀತಿಗಳನ್ನು ಕೂಡಲೇ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಾಪಸ್ ಪಡೆಯಬೇಕು. ಮತ್ತು ಕೋವಿಡ್ ಸಂಕಷ್ಟದಲ್ಲಿ ಇವರು ಎಲ್ಲರಿಗೂ ಆಹಾರ,ಆರೋಗ್ಯ,ಉಚಿತ ವ್ಯವಸ್ಥೆ ಮಾಡಬೇಕು.ಮತ್ತು ಎಲ್ಲಾ ಕುಟುಂಬಗಳಿಗೆ. ೧೦ ಸಾವಿರ ನಗದು ಹಣ ನೀಡಬೇಕು. ಹಾಗೂ ಕಾರ್ಮಿಕರ ಸಮಾನ ಕೆಲಸ ಸಮಾನ ವೇತನ ಪದ್ದತಿ ಜಾರಿಗೊಳಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿಲಾನಿ ಪಾಷ, ಕೆ.ನಾರಾಯಣ,ಮಲ್ಲೇಶ, ಎಂ.ಡಿ.ಖಾಜಾ ಹಸನ್, ಎಂ.ಡಿ. ಖಾದರ, ಸಮೀನ್ ಹುಲ್ಲಾ, ಮಹಾರಾಜ್ನ,ನರಸಿಂಹಯಾದವ್,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.