ಸಿ.ಎ.ಸೈಟ್ ಕಬಳಿಕೆ, ತೆರವಿಗೆ ೧೫ ದಿನ ಗಡುವು

ರಾಯಚೂರು,ಡಿ.೨೯- ನಗರದ ವಾರ್ಡ ನ ೨೮ ರ ಸರ್ವೆ ನಂ: ೩೮೪/೧ಎ ವಸತಿ ಬದಲಾವಣೆಯಲ್ಲಿ ಕನ್ನಡ ಪ್ರೌಢ ಶಾಲೆಗೆ ಮೀಸಲು ಇಟ್ಟಿರುವ ಸಿ.ಎ.ಸೈಟ್ ನ್ನು ಕೆಲ ಭೂಗಳ್ಳ ಕಬಳಿಸಿ ಅನಧಿಕೃತ ಕಟ್ಟಡವನ್ನು ಕಟ್ಟಿದ್ದು, ೧೫ ದಿನದೊಳಗೆ ತೆರವುಗೊಳಿಸದಿದ್ದರೆ ನಗರಸಭೆ ಕಚೇರಿ ಮುಂದೆ ಧರಣಿಯನ್ನು ಮಾಡುತ್ತೇವೆ ಎಂದು ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಂಬಾಜಿರಾವ್ ಮೈದರಕರ್ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ನಗರದ ವಾರ್ಡ ನಂ ೨೮ ರಲ್ಲಿ ಸಂತೋಷ ನಗರ ಎಂಬ ವಸತಿ ಬಡವಾಣೆಯಲ್ಲಿರುವ ಸಿ.ಎ. ಸೈಟ್ ಎಲ್.ಬಿ.ಎಸ್.ನಗರ ಕನ್ನಡ ಪ್ರೌಢ ಶಾಲೆಗೆ ಮಂಜೂರು ಆಗಿದೆ. ಆದರೆ ಕೆಲವು ಕಿಡಿಗೆಡಿಗಳು ಆ ಜಾಗದಲ್ಲಿ ಅನಧಿಕೃತ ಕಟ್ಟಡವನ್ನು ಕಟ್ಟಿ ದೇವರ ಹೆಸರಿನಲ್ಲಿ ಸರ್ಕಾರ ಜಾಗವನ್ನು ಕಬಳಿಸಿ ಶಾಲೆ ನಿರ್ಮಾಣ ಕಾರ್ಯದಲ್ಲಿ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಶಾಲೆಗೆ ಮಿಸಲೀಟ್ಟ ಜಾಗದಲ್ಲಿರುವ ಅನಧಿಕೃತ ಕಟ್ಟಡವನ್ನು ನೆಲಸಮ ಮಾಡಿ ಸರ್ಕಾರಿ ಜಾಗವನ್ನು ಕಬಳಿಸಲು ಪ್ರಯತ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಅನುಕೂಲ ಮಾಡಿಕೊಡಬೇಕೆಂದು ಎಂದ ಅವರು,
ನಿರ್ಲಕ್ಷ್ಯ ವಹಿಸಿದ ನಗರ ಸಭೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಕಟ್ಟಡ ಕಟ್ಟಬೇಕಾದರೆ ನಗರಸಭೆ ಪರವಾನಿಗೆ ಪಡೆಯಬೇಕು, ಆದರೆ ನಗರ ಸಭೆ ಪರವಾನಿಗೆ ಪಡೆಯದೆ ಅಕ್ರಮ ಕೂಟ ಕಟ್ಟಿಕೊಂಡು ದೇವರ ಹೆಸರಿನಲ್ಲಿ ಅನಧಿಕೃತ ಕಟ್ಟಡ ಕಟ್ಟಿದರು ಕೂಡ ನಗರಸಭೆ ಹಿರಿಯ ಅಭಿಯಂತರರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಲೋಪದೋಷಗಳನ್ನು ಪ್ರಶ್ನಿಸಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು
ಈ ಸಂದರ್ಭದಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಹೀರುದ್ದೀನ್ , ಶಂಕರ್ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.