ಸಿ.ಎ.ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.19: ಸ್ಥಳೀಯ ರಾಘವೇಂದ್ರ ಕಾಲೋನಿಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ದಕ್ಷಿಣ ಪ್ರಾಂತಿಯ ಬಳ್ಳಾರಿ ಶಾಖೆಯ 2024-25 ರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನಿನ್ನೆ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು
ಶಾಖೆಯ ನೂತನ ಅಧ್ಯಕ್ಷರಾಗಿ  ವೆಂಕಟ ನಾರಾಯಣ ಚಲುವಾದ್ ಉಪಾಧ್ಯಕ್ಷರಾಗಿ ಗಜರಾಜ ಡಿ, ಕಾರ್ಯದರ್ಶಿಯಾಗಿ ಕೆ. ವಿ. ಸ್ವಪ್ನ ಪ್ರಿಯ, ಖಜಾಂಚಿಯಾಗಿ ಕೆ. ಪುರುಷೋತ್ತಮ ರೆಡ್ಡಿ, ವಿಧ್ಯಾರ್ಥಿ ವಿಭಾಗದ ಅಧ್ಯಕ್ಷರಾಗಿ ಕೆ. ನಾಗನಗೌಡ ಮತ್ತು ಸದಸ್ಯರಾಗಿ ವಿನೋದ್ ಕುಮಾರ್ ಬಾಗ್ರೇಚ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ವಿಶ್ವನಾಥ ಆಚಾರಿ ಮತ್ತು ಕೋಮಲ್ ಜೈನ್ ಅನ್ನು ಆಯ್ಕೆಮಾಡಲಾಯಿತು.
2023-24 ರ ಸಾಲಿನ ಅಧ್ಯಕ್ಷರಾದ ಕೆ. ನಾಗನಗೌಡ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ ನಾರಾಯಣ ಚಲುವಾದ್ ಅವರಿಗೆ ಆಧಿಕಾರವನ್ನು ಹಸ್ತಾಂತರಿಸಿದರು.
ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಚೆನ್ನೈ) ಅಧ್ಯಕ್ಷರಾದ ಅಂ  ಪನ್ನರಾಜ್ ಎಸ್, ಇವರನೇತೃತ್ವದಲ್ಲಿ ಪದವಿ ಪ್ರಮಾಣ ನಡೆಸಲಾಯಿತು.
ಇದೇ ಕಾರ್ಯಕ್ರಮದಲ್ಲಿ 16 ಮಾಜಿ ಅಧ್ಯಕ್ಷರುಗಳಿಗಾದ ಎಸ್.ಸಿ. ಬಾಗ್ರೇಚ, ಜಯಪ್ರಕಾಶ ಗುಪ್ತ, ಪನ್ನರಾಜ್ ಎಸ್,  ಚಂದ್ರಪ್ಪ ಕೆ.ವಿ, ರಮೇಶ್ ವೈ, ಬಿ. ಕೆ. ಅನಿಲ್ ಕುಮಾರ್, ರಾಜಶೇಖರ್ ಕೆ, ಲಕ್ಷ್ಮಿನಾರಾಯಣ, ಅಂ ಭರತ್ ಕುಮಾರ್ ಗುಪ್ತ, ಸಿದ್ದರಾಮೇಶ್ವರ ಗೌಡ, ಅಂ ರಾಜೇಶ್ ಬಾಗ್ರೇಚ, ಎರ್ರಿಸ್ವಾಮಿ ಸಿ, ಕಿರಣ್ ಕುಮಾರ್ ಜೈನ್, ಹೊನ್ನೂರು ಸ್ವಾಮಿ, ಪ್ರಸನ್ನ ಕುಮಾರ್ ಪಾಟೀಲ್, ವಿನೋದ್ ಕುಮಾರ್ ಬಾಗ್ರೇಚ ಇವರೆಲ್ಲರನ್ನೂ ಒಂದೇ ವೇದಿಕೆ ಮೇಲೆ ಸನ್ಮಾನಿಸಲಾಯಿತು.
ಸಂಜೆ 7 ಗಂಟೆಯಿಂದ ಅಂ ವಿಧ್ಯಾರ್ಥಿಗಳಿಗೆ SICASA ANNUAL DAY ನಡೆಸಲಾಯಿತು. ನೃತ್ಯ, ನಾಟಕ, ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಡಾ. ಮಂಜುನಾಥ ಅವರನ್ನು ಮುಖ್ಯ ಅತಿಥಿಗಳಾಗಿ ಆಗಮಿಸಲಾಗಿತ್ತು, ಅವರು ವಿಧ್ಯಾರ್ಥಿಗಳನ್ನು ಕುರಿತು ಪರಿಕ್ಷೆ ಬಗ್ಗೆ ಮಾತನಾಡಿದರು.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಬಳ್ಳಾರಿ ಶಾಖೆಯ ಸುಮಾರು 250 ಸದಸ್ಯರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.