ಸಿ ಎ ಪರೀಕ್ಷೆಯಲ್ಲಿ ಸಾಹೇಬಲಾಲ ಕಮಾಲನವರ ತೇರ್ಗಡೆ

ಅಥಣಿ : ಜು.11:ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅಥಣಿ ತಾಲೂಕಿನ ಜನವಾಡ ಗ್ರಾಮದ ನಿವಾಸಿ ಮಹ್ಮದ್ ಹಾಗೂ ದುಲ್ಹನಬಿ ಅವರ ಸುಪುತ್ರ ಸಾಹೇಬಲಾಲ ಮಹ್ಮದ ಕಮಾಲನವರ ಉತ್ತಮ ಅಂಕ ಗಳಿಸುವ ಮೂಲಕ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಹುಟ್ಟೂರು ಜನವಾಡ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಅಥಣಿ ಪಟ್ಟಣದ ಅಬುಲ್ ಕಲಾಂ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿ, ಅಥಣಿ ಪಟ್ಟಣದ ಎಸ್ ಎಸ್ ಎಂಎಸ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಪದವಿ ಶಿಕ್ಷಣವನ್ನು ಮುಗಿಸಿದರು.ಸಿ.ಎ ಆಗುವ ಕನಸು ಹೊಂದಿದ್ದ ಸಾಹೇಬಲಾಲ ಮಹ್ಮದ ಕಮಾಲನವರ ಚಿಕ್ಕೋಡಿಯ ಮಗ್ಗೆನ್ನವರ ಅಂಡ್ ಕಂಪನಿಯಲ್ಲಿ ಸತತ ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಂಡು ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಸಾಹೇಬಲಾಲ ಮಹ್ಮದ ಕಮಾಲನವರ ಅವರಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಸಂಬಂಧಿಕರು, ಸ್ನೇಹಿತರು, ಶಿಕ್ಷಕರು ಶುಭಾಶಯಗಳನ್ನು ಕೋರಿದ್ದಾರೆ.